News Kannada
Wednesday, March 29 2023

ಕ್ರೀಡೆ

ವಿಶ್ವ ಬ್ಯಾಡ್ಮಿಂಟನ್ ಚಾಂಪಿಯನ್ ಶಿಪ್: ಪಿ. ವಿ. ಸಿಂಧು ಸೇರಿ ಭಾರತದ 25 ಆಟಗಾರರು ಭಾಗಿ

Photo Credit :

ಹುಯೆಲ್ವಾ/ ಸ್ಪೇನ್ : ವಿಶ್ವ ಬ್ಯಾಡ್ಮಿಂಟನ್ ಚಾಂಪಿಯನ್ ಶಿಪ್ ಇಂದು ಹುಯೆಲ್ವಾದಲ್ಲಿರುವ ಕ್ಯಾರೊಲಿನಾ ಮರಿನ್ ಸ್ಪೋರ್ಟ್ಸ್ ಪ್ಯಾಲೇಸ್ ನಲ್ಲಿ ಪ್ರಾರಂಭವಾಗಲಿದೆ. ಇದರಲ್ಲಿ ಪಿ. ವಿ. ಸಿಂಧು ನಾಯಕತ್ವದಲ್ಲಿ ಭಾರತದ 25 ಆಟಗಾರರು ಭಾಗವಹಿಸುತ್ತಿದ್ದಾರೆ .

ಎರಡು ಬಾರಿ ಒಲಿಂಪಿಕ್ಸ್ ನಲ್ಲಿ ಪದಕ ಗೆದ್ದಿರುವ ಪಿ.ವಿ. ಸಿಂಧು ಹಾಲಿ ಚಾಂಪಿಯನ್ ಕೂಡಾ ಆಗಿದ್ದಾರೆ. 2019ರಲ್ಲಿ ಇವರು ಬಾಸೆಲ್ ನಲ್ಲಿ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿದ್ದರು. ನಂತರ ಅವರು ಭಾರತದ ಮೊದಲ ವಿಶ್ವ ಚಾಂಪಿಯನ್ ಎನಿಸಿಕೊಂಡಿದ್ದರು. ಈ ಸ್ಪರ್ಧೆಯಲ್ಲಿ ಭಾಗವಹಿಸುವುದರ ಮೂಲಕ ಸಿಂಧು ಗರಿಷ್ಠ 6 ಪದಕಗಳನ್ನು ಗೆಲ್ಲುವ ಮೊದಲ ಮಹಿಳಾ ಆಟಗಾರ್ತಿಯಾಗುವ ಅವಕಾಶ ಪಡೆದಿದ್ದಾರೆ. ಪಿ. ವಿ. ಸಿಂಧು ಹಾಗೂ ಚೀನಾದ ಜೆಂಗ್ ನಿಂಗ್ 5-5 ಪದಕಗಳನ್ನು ಹೊಂದಿರುವ ಹಿರಿಮೆಯಿದೆ.

ಈ ಮಧ್ಯೆ ಮೂರು ಬಾರಿಯ ಚಾಂಪಿಯನ್ ಮತ್ತು ಸ್ಥಳೀಯ ಆಟಗಾರ್ತಿ ಕೆರೂಲಿನಾ ಮರಿನ್ ಹಾಗೂ 2017ರ ವಿಜೇತ ನೊಜೊಮಿ ಒಕುಹರಾ ಪಂದ್ಯಾವಳಿಯಿಂದ ಹಿಂದೆ ಸರಿದಿದ್ದಾರೆ. ಅಲ್ಲದೇ, ಭಾರತದ ಸೈನಾ ನೆಹ್ವಾಲ್ ಗಾಯದ ಸಮಸ್ಯೆಯಿಂದ ಮೊದಲ ಬಾರಿಗೆ ಚಾಂಪಿಯನ್ ಶಿಪ್ ನಿಂದ ಹೊರಗುಳಿಯುತ್ತಿದ್ದಾರೆ. ಈ ಟೂರ್ನಿಯಲ್ಲಿ ಪಿ. ವಿ. ಸಿಂಧು ಮೊದಲ ಸುತ್ತಿನಲ್ಲಿ ಬೈ ಪಡೆದುಕೊಂಡಿದ್ದು, ಎರಡನೇ ಸುತ್ತಿನಲ್ಲಿ ಮಾರ್ಟಿನಾ ರೆಪಿಸ್ಕಾ ಅವರನ್ನು ಎದುರಿಸಲಿದ್ದಾರೆ.

ಪುರುಷರ ಸಿಂಗಲ್ಸ್ ನಲ್ಲಿ 12ನೇ ಶ್ರೇಯಾಂಕದ ಕಿಡಂಬಿ ಶ್ರೀಕಾಂತ್ ಅವರು ಮೊದಲ ಪಂದ್ಯದಲ್ಲಿ ಸ್ಪೇನ್ ನ ಪಾಬ್ಲೊ ಅಬಿಯಾನ್ ಮತ್ತು ಕಂಚಿನ ಪದಕ ವಿಜೇತ ಬಿ ಸಾಯಿ ಪ್ರಣೀತ್, ನೆದರ್ ಲ್ಯಾಂಡ್ಸ್ ನ ಮಾರ್ಕ್ ಕೆಲ್ಜೊ ವಿರುದ್ಧ ಸೆಣಸಲಿದ್ದಾರೆ. ಮಾಜಿ ನಂಬರ್ 10 ಆಟಗಾರ ಎಚ್ ಎಸ್ ಪ್ರಣಯ್ ಅವರು ಲಾಂಗ್ ಆಂಗಸ್ ವಿರುದ್ಧ ಕಣಕ್ಕಿಳಿಯಲಿದ್ದಾರೆ. ಭಾರತದ 11 ಜೋಡಿಗಳು ಡಬಲ್ಸ್ ನಲ್ಲಿ ಭಾಗವಹಿಸುತ್ತಿವೆ. 50 ದೇಶಗಳ ಒಟ್ಟು 337 ಆಟಗಾರರು ಈ ಚಾಂಪಿಯನ್ ಶಿಪ್ ನಲ್ಲಿ ಸ್ಪರ್ಧಿಸುತ್ತಿದ್ದಾರೆ.

See also  ಕೊರಿಯಾ ಓಪನ್ ಬ್ಯಾಡ್ಮಿಂಟನ್: ಪ್ರೀಕ್ವಾರ್ಟರ್‌ ಫೈನಲ್‌ಗೆ ಸಿಂಧು, ಶ್ರೀಕಾಂತ್‌
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published. Required fields are marked *

12790
NewsKannada

Read More Articles

Subscribe Newsletter

Get latest news karnataka updates on your email.

[mc4wp_form id="118196"]

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು