ಖ್ಯಾತ ಟೆನ್ನಿಸ್ ಆಟಗಾರ ರಾಫೆಲ್ ನಡಾಲ್ ಗೆ ಕೊರೋನಾ ಪಾಸಿಟಿವ್ ದೃಢಪಟ್ಟಿದೆ. ಅಬುಧಾಬಿ ಟೆನಿಸ್ ಸ್ಪರ್ಧೆಯಲ್ಲಿ ಭಾಗವಹಿಸಿದ ಬಳಿಕ ಸ್ಪೇನ್ ನಲ್ಲಿ ಕೊರೋನಾ ಪರೀಕ್ಷೆಗೆ ಒಳಪಟ್ಟಂತ ನಡಾಲ್ ಗೆ ಕೊರೋನಾ ಪಾಸಿಟಿವ್ ಎಂಬುದಾಗಿ ತಿಳಿದುಬಂದಿದೆ.
ಈ ಬಗ್ಗೆ ಟ್ವಿಟ್ಟರ್ ನಲ್ಲಿ ಮಾಹಿತಿ ಹಂಚಿಕೊಂಡಿರುವಂತ ಅವರು, ಹಾಯ್ ಆಲ್. ಅಬುಧಾಬಿ ಪಂದ್ಯಾವಳಿಯನ್ನು ಆಡಿದ ಮನೆಗೆ ಹಿಂದಿರುಗಿದ ನಂತರ, ನಾನು ಸ್ಪೇನ್ ಗೆ ಬಂದಾಗ, ನಾನು ಆರ್ ಟಿಪಿಸಿಆರ್ ಮೂಲಕ ಕೊರೋನಾ ಪರೀಕ್ಷೆಗೆ ಒಳಗಾಗಿದ್ದೆ. ಈಗ ನನಗೆ ಕೋವಿಡ್-19 ಪಾಸಿಟಿವ್ ಎಂಬುದಾಗಿ ದೃಢಪಟ್ಟಿರೋದಾಗಿ ತಿಳಿಸಿದ್ದಾರೆ.
ನನಗೆ ಯಾವುದೇ ತೀವ್ರ ತರದ ರೋಗದ ಲಕ್ಷಣಗಳಿಲ್ಲ. ಮುಂಜಾಗ್ರತಾ ಕ್ರಮವಾಗಿ ಸ್ಪೇನ್ ನಿಂದ ಮನೆಗೆ ಮರಳಿರುತ್ತೇನೆ. ನನ್ನ ಸಂಪರ್ಕದಲ್ಲಿದ್ದಂತ ಎಲ್ಲರೂ ಕೊರೋನಾ ಪರೀಕ್ಷೆಗೆ ಒಳಪಡುವಂತೆ ಅವರು ಸ್ಪೇನ್ ಭಾಷೆಯಲ್ಲಿ ಮನವಿ ಮಾಡಿದ್ದಾರೆ.