ಅಂತಾರಾಷ್ಟ್ರೀಯ ಫುಟ್ ಬಾಲ್ ನ ಜಾಗತಿಕ ಮಂಡಳಿ ಫಿಫಾ, ವಿಶ್ವಕಪ್ ಟೂರ್ನಿಗೆ ರಷ್ಯಾವನ್ನು ಒಕ್ಕೂಟದಿಂದ ಹೊರ ಹಾಕಿದೆ. ಕತಾರ್ ನಲ್ಲಿ ನಡೆಯಲಿರುವ ಫುಟ್ ಬಾಲ್ ವಿಶ್ವಕಪ್ ಟೂರ್ನಿಯಿಂದ ರಷ್ಯಾದ ತಂಡಗಳನ್ನು ಬಹಿಷ್ಕರಿಸಲಾಗಿದೆ.
ಉಕ್ರೇನ್ ಮೇಲೆ ನಡೆಸುತ್ತಿರುವ ಆಕ್ರಮಣವನ್ನು ವಿರೋಧಿಸಿದ ಫಿಫಾ ರಷ್ಯಾ ವಿರುದ್ಧ ಈ ನಿರ್ಬಂಧ ಹೇರಿದೆ. ಈಗಾಗಲೇ ಸ್ವೀಡನ್ ಹಾಗೂ ಪೊಲೆಂಡ್ ಫುಟ್ ಬಾಲ್ ತಂಡಗಳು ರಷ್ಯಾ ವಿರುದ್ಧ ಆಡುವುದಿಲ್ಲ ಎಂದು ತಿಳಿಸಿವೆ.
ಯುರೋಪ್ ಫುಟ್ ಬಾಲ್ ಒಕ್ಕೂಟದ ಆಡಳಿತ ಮಂಡಳಿಯ ಸಮನ್ವಯತೆಯೊಂದಿಗೆ ಫಿಫಾ ಈ ನಿರ್ಧಾರ ಕೈಗೊಂಡಿದೆ.
ಫಿಫಾ ಸಂಸ್ಥೆಯ ಮುಂದಿನ ಆದೇಶದ ವರೆಗೆ ರಷ್ಯಾದ ತಂಡಗಳು ಹಾಗೂ ಕ್ಲಬ್ ಗಳು ಅಂತಾರಾಷ್ಟ್ರೀಯ ಟೂರ್ನಿಗಳಲ್ಲಿ ಭಾಗವಹಿಸಲು ಅವಕಾಶ ಇಲ್ಲ ಎಂದು ಘೋಷಿಸಿದೆ.
FIFA/UEFA suspend Russian clubs and national teams from all competitions
▶️ https://t.co/Q2htzW3W9z pic.twitter.com/LFo1bUtqmm
— FIFA Media (@fifamedia) February 28, 2022