News Kannada
Saturday, September 24 2022

ಕ್ರೀಡೆ

ನಾರ್ವೆ ಚೆಸ್ ಟೂರ್ನಿ: ಲಾಗ್ರೇವ್ ವಿರುದ್ಧ ವಿಶ್ವನಾಥ್ ಆನಂದ್ ಗೆಲುವು - 1 min read

Photo Credit :

ನಾರ್ವೆ: ಭಾರತದ ಚೆಸ್ ಆಟಗಾರ ವಿಶ್ವನಾಥನ್ ಆನಂದ್ ಅವರು ನಾರ್ವೆ ಚೆಸ್ ಟೂರ್ನಿಯ ಕ್ಲಾಸಿಕಲ್ ವಿಭಾಗದ ಮೊದಲ ಸುತ್ತಿನ ಪಂದ್ಯದಲ್ಲಿ ಮ್ಯಾಕ್ಸಿಮ್ ವಾಚಿಯರ್ – ಲಾಗ್ರೇವ್ ಅವರನ್ನು ಸೋಲಿಸಿದರು.

ಮಂಗಳವಾರ ತಡರಾತ್ರಿ ಫ್ರೆಂಚ್ ಆಟಗಾರನ ವಿರುದ್ಧದ ಗೆಲುವಿನಿಂದ ಭಾರತದ ಗ್ರಾಂಡ್​​ಮಾಸ್ಟರ್​​ 3 ಅಂಕ ಗಳಿಸಲು ಸಾಧ್ಯವಾಯಿತು.

ಅಮೆರಿಕದ ವೆಸ್ಲಿ ಸೋ ಮೊದಲ ಸುತ್ತಿನಲ್ಲಿ ತೈಮೂರ್ ರಾಜ್‌ದಬೊವ್ ಅವರನ್ನು ಸೋಲಿಸಿ ಆನಂದ್‌ ಅವರೊಂದಿಗೆ ಸಮಬಲ ಸಾಧಿಸಿದರು. ಆದರೆ ಮ್ಯಾಗ್ನಸ್ ಕಾರ್ಲ್‌ಸೆನ್ ಚೀನಾದ ವಾಂಗ್ ಹ್ಯಾಡ್ ಅವರೊಂದಿಗೆ ಡ್ರಾಗೆ ತೃಪ್ತಿಪಡಬೇಕಾಯಿತು. ಕ್ಲಾಸಿಕಲ್‌ಗೆ ಮೊದಲು ನಡೆದ ಬ್ಲಿಟ್ಜ್ ಸ್ಪರ್ಧೆಯಲ್ಲಿ, ಏಳನೇ ಸುತ್ತಿನಲ್ಲಿ ಆನಂದ್​ ಕಾರ್ಲ್‌ಸೆನ್‌ ಅವರನ್ನು ಸೋಲಿಸಿ ಆಘಾತ ನೀಡಿದರು. ಆದಾಗ್ಯೂ 5 ಅಂಕಗಳನ್ನು ಗಳಿಸಿದ್ದು, ಕ್ರಮವಾಗಿ ನಾಲ್ಕನೇ ಮತ್ತು ಒಂಬತ್ತನೇ ಸುತ್ತಿನಲ್ಲಿ ನೆದರ್‌ಲ್ಯಾಂಡ್‌ನ ಅನೀಶ್ ಗಿರಿ ಮತ್ತು ಫ್ರಾನ್ಸ್‌ನ ಮ್ಯಾಕ್ಸಿಮ್ ವಾಚಿಯರ್ – ಲಾಗ್ರೇವ್ ವಿರುದ್ಧ ವಿಶ್ವನಾಥನ್ ಆನಂದ್ ಸೋಲು ಅನುಭವಿಸಿದರು. ಒಟ್ಟು 6.5 ಅಂಕಗಳೊಂದಿಗೆ ಬ್ಲಿಟ್ಜ್ ಅಂಕಪಟ್ಟಿಯಲ್ಲಿ ಅಗ್ರಸ್ಥಾನ ಗಳಿಸಿದರು.

See also  ಪ್ರೇಕ್ಷಕರಿಲ್ಲದೆ ಇದ್ದರೂ ಕ್ರಿಕೆಟ್ ಗುಣಮಟ್ಟ ತಗ್ಗದು: ವಿವಿಎಸ್ ಲಕ್ಷ್ಮಣ್
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

1616
Subscribe to our Brand New YouTube Channel

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು