ನ್ಯೂಯಾರ್ಕ್, ಸೆ.3: ಟೆನ್ನಿಸ್ ಆಟಗಾರ್ತಿ ಸೆರೆನಾ ವಿಲಿಯಮ್ಸ್ ಅವರು 27 ವರ್ಷಗಳ ವೃತ್ತಿ ಜೀವನಕ್ಕೆ ತೆರೆ ಎಳೆದಿದ್ದಾರೆ. 40 ವರ್ಷದ ಆಟಗಾರ್ತಿ ಸೆರೆನಾ 23 ಪ್ರಮುಖ ಸಿಂಗಲ್ಸ್ ಟ್ರೋಫಿಗಳನ್ನು ಗೆದ್ದು ವಿಶ್ವದಾದ್ಯಂತ ಮನೆಮಾತಾಗಿದ್ದಾರೆ.
ಅಮೆರಿಕನ್ ಓಪನ್ ಗ್ರ್ಯಾಂಡ್ಸ್ಲಾಮ್ ಟೆನ್ನಿಸ್ ಟೂರ್ನಿಯಲ್ಲಿ ಸೋತು ಸೆರೆನಾ ವಿಲಿಯಮ್ಸನ್ ವೃತ್ತಿ ಜೀವನಕ್ಕೆ ಗುಡ್ಬೈ ಹೇಳಿದ್ದಾರೆ.
ಶನಿವಾರ ನಡೆದ ಅಮೆರಿಕನ್ ಓಪನ್ ಗ್ರ್ಯಾಂಡ್ಸ್ಲಾಮ್ ಟೆನ್ನಿಸ್ ಟೂರ್ನಿಯಲ್ಲಿ ಮಹಿಳೆಯರ ಸಿಂಗಲ್ಸ್ನ ಮೂರನೇ ಸುತ್ತಿನಲ್ಲಿ ಆಸ್ಟ್ರೇಲಿಯಾದ ಅಜ್ಲಾ ಟಾಮ್ಲಜಾನೊವಿಚ್ ವಿರುದ್ಧ 7-5, 6-7,6-1 ಅಂತರದಿಂದ ಸೋಲು ಕಂಡಿದ್ದಾರೆ. ಮೊದಲ ಸೆಟ್ನಲ್ಲಿ ಸೋತರೂ, ಎರಡನೇ ಸೆಟ್ನಲ್ಲಿ ಕಮ್ಬ್ಯಾಕ್ ಮಾಡಿದ್ದ ಟೆನ್ನಿಸ್ ತಾರೆ ಸೆರೆನಾ, ನಿರ್ಣಾಯಕ ಸೆಟ್ನಲ್ಲಿ ಹಿನ್ನಡೆ ಅನುಭವಿಸಿ, ಸೋಲು ಒಪ್ಪಿಕೊಂಡರು. ಈ ಮೂಲಕ ತಮ್ಮ ಟೆನ್ನಿಸ್ ವೃತ್ತಿ ಬದುಕಿಗೆ ವಿದಾಯ ಹೇಳಿದ್ದಾರೆ.
ಸೆರೆನಾ ವಿಲಿಯಮ್ಸ್ ಟೆನ್ನಿಸ್ನಿಂದ ನಿವೃತ್ತಿ ಘೋಷಿಸುವುದಾಗಿ ಕಳೆದ ಕೆಲ ದಿನಗಳ ಹಿಂದೆ ಸುಳಿವು ನೀಡಿದ್ದ ಅವರು, ಸಾಮಾಜಿಕ ಜಾಲತಾಣದಲ್ಲಿ ಮಾಹಿತಿ ಹಂಚಿಕೊಂಡಿದ್ದರು. ಈ ವರ್ಷದ ಅಂತಿಮ ಗ್ರ್ಯಾಂಡ್ ಸ್ಲಾಮ್ ಪಂದ್ಯಾವಳಿ ಬಳಿಕ ಟೆನ್ನಿಸ್ ತ್ಯಜಿಸಲು ಯೋಚಿಸುತ್ತಿರುವುದಾಗಿ ಇನ್ಸ್ಟಾಗ್ರಾಮ್ನಲ್ಲಿ ಬರೆದುಕೊಂಡಿದ್ದರು.