News Kannada
Wednesday, October 04 2023
ಕ್ರೀಡೆ

ವಿಶ್ವ ಚಾಂಪಿಯನ್ ಷಿಪ್: ವೇಟ್ ಲಿಫ್ಟರ್ ಮೀರಾಬಾಯಿ ಚಾನುಗೆ ಬೆಳ್ಳಿ ಪದಕ

Meera
Photo Credit : News Kannada

ಬೊಗೊಟಾ: ಕೊಲಂಬಿಯಾದ ಬೊಗೊಟಾದಲ್ಲಿ ನಡೆದ 2022ರ ವಿಶ್ವ ವೇಟ್ಲಿಫ್ಟಿಂಗ್ ಚಾಂಪಿಯನ್ಶಿಪ್ನಲ್ಲಿ ಒಲಿಂಪಿಕ್ ಪದಕ ವಿಜೇತೆ ಮೀರಾಬಾಯಿ ಚಾನು ಬೆಳ್ಳಿ ಪದಕ ಗೆದ್ದಿದ್ದಾರೆ.

ಮೀರಾಬಾಯಿ ಅವರು ಒಟ್ಟು 200 ಕೆಜಿ (87 ಕೆಜಿ ಸ್ನ್ಯಾಚ್ + 113 ಕೆಜಿ ಕ್ಲೀನ್ & ಜರ್ಕ್) ಭಾರ ಎತ್ತಿದ್ದಾರೆ. ಚೀನಾದ ಒಲಂಪಿಕ್ ಚಾಂಪಿಯನ್ ಹೌ ಝಿಹುವಾ (198 ಕೆಜಿ) ಗಿಂತ 2 ಕೆಜಿ ಹೆಚ್ಚು ಮತ್ತು ಚಿನ್ನದ ಪದಕ ಗೆದ್ದ ಮತ್ತೊಬ್ಬ ಚೈನೀಸ್ ಜಿಯಾಂಗ್ ಹುಯಿಹುವಾ (206 ಕೆಜಿ: 93 + 113) 6 ಕೆಜಿ ಕಡಿಮೆ ತೂಕವನ್ನು ಮೀರಾಬಾಯಿ ಚಾನು ಎತ್ತಿದ್ದಾರೆ.

ಚೀನಾದ ಹೌ ಝಿಹುಯಿ 198 ತೂಕವನ್ನು ಎತ್ತುವ ಮೂಲಕ (89 ಕೆಜಿ ಜೊತೆಗೆ 109 ಕೆಜಿ) ಕಂಚಿನ ಪದಕ ಪಡೆದರು.

ಮಣಿಕಟ್ಟಿನ ಸಮಸ್ಯೆಯಿಂದ ಬಳಲುತ್ತಿರುವ ಮೀರಾಬಾಯಿ ಅವರ ಎರಡನೇ ವಿಶ್ವ ಪದಕವಾಗಿದ್ದು, ಈ ಹಿಂದೆ 2017 ರ ವಿಶ್ವ ಚಾಂಪಿಯನ್ಶಿಪ್ನಲ್ಲಿ 194 ಕೆಜಿ (85 ಕೆಜಿ ಜೊತೆಗೆ 109 ಕೆಜಿ) ಎತ್ತುವ ಮೂಲಕ ಚಿನ್ನ ಗೆದ್ದಿದ್ದರು. ಅವರು 2019 ರ ಆವೃತ್ತಿಯಲ್ಲಿ ನಾಲ್ಕನೇ ಸ್ಥಾನ ಪಡೆದಿದ್ದರು.

See also  ಎಸ್.ಡಿ.ಎಂ ತಂಡಕ್ಕೆ ರನ್ನರ್ಸ್ ಅಪ್ ಪ್ರಶಸ್ತಿ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published. Required fields are marked *

12792
NewsKannada

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು