ಥರ್ಡ್ ಅಂಪಾಯರ್ ವಿರುದ್ಧ ಇಂಗ್ಲೆಂಡ್ ತಂಡ ದೂರು

ಥರ್ಡ್ ಅಂಪಾಯರ್ ವಿರುದ್ಧ ಇಂಗ್ಲೆಂಡ್ ತಂಡ ದೂರು

HSA   ¦    Feb 25, 2021 09:51:57 AM (IST)
ಥರ್ಡ್ ಅಂಪಾಯರ್ ವಿರುದ್ಧ ಇಂಗ್ಲೆಂಡ್ ತಂಡ ದೂರು

ಅಹ್ಮದಾಬಾದ್: ಬುಧವಾರ ಉದ್ಘಾಟನೆಗೊಂಡ ವಿಶ್ವದ ಅತೀ ದೊಡ್ಡ ಕ್ರಿಕೆಟ್ ಮೈದಾನವಾದ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಮೂರನೇ ಟೆಸ್ಟ್ ವೇಳೆ ಇಂಗ್ಲೆಂಡ್ ಅಂಪಾಯರ್ ಬಗ್ಗೆ ಮ್ಯಾಚ್ ರೆಫ್ರಿಗೆ ದೂರು ನೀಡಿದೆ.

ಮೂರನೇ ಟೆಸ್ಟ್ ನ ಮೊದಲ ದಿನದ ಅಂತ್ಯದ ಬಳಿಕ ಅಂತಾರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್(ಐಸಿಸಿ) ಮ್ಯಾಚ್ ರೆಫ್ರಿ ಜಾವಗಲ್ ಶ್ರೀನಾಥ್ ಅವರಿಗೆ ಇಂಗ್ಲೆಂಡ್ ತಂಡದ ನಾಯಕ ಜೋ ರೂಟ್ ಮತ್ತು ಕೋಚ್ ಸಿಲ್ವರ್ವುಡ್ ಅವರು ದೂರು ನೀಡಿರುವರು.

ಭಾರತದ ಆರಂಭಿಕ ಆಟಗಾರ ಶುಭ್ಮನ್ ಗಿಲ್ ಅವರು ಬೆನ್ ಸ್ಟೋಕ್ಸ್ ಬೌಲಿಂಗ್ ನಲ್ಲಿ ಸ್ಟುವರ್ಟ್ ಬ್ರಾಡ್ ಗೆ ಕ್ಯಾಚ್ ನೀಡಿದ್ದರು. ಆದರೆ ಮೂರನೇ ಅಂಪಾಯರ್ ಚೆಂಡು ನೆಲಕ್ಕೆ ತಾಗಿರುವುದಾಗಿ ಹೇಳಿದ್ದರು. ರೋಹಿತ್ ಶರ್ಮಾ ಸರಿಯಾದ ಸಮಯದಲ್ಲಿ ಕಾಲನ್ನು ಕ್ರೀಸಿನಲ್ಲಿಟ್ಟ ಕಾರಣದಿಂದಾಗಿ ಬೆನ್ ಫೋಕ್ಸ್ ಗೆ ವಿಕೆಟ್ ಲಭ್ಯವಾಗಲಿಲ್ಲ. ಈ ಎರಡು ನಿರ್ಧಾರಗಳನ್ನು ಹೆಚ್ಚು ಕ್ಯಾಮರಾ ನೆರವು ಪಡೆಯದೆ ಅವಸರದಲ್ಲಿ ತೆಗೆದುಕೊಳ್ಳಲಾಗಿದೆ ಎಂದು ಪ್ರವಾಸಿ ತಂಡ ಆರೋಪಿಸಿದೆ.