ಐಸಿಸಿ ಟೆಸ್ಟ್ ಪಂದ್ಯದ ನಂತರ ಕ್ರಿಕೆಟಿಗೆ ವಿದಾಯ ಹೇಳುತ್ತಿದ್ದಾರೆ ಬಿ.ಜೆ ವ್ಯಾಟ್ಲಿಂಗ್

ಐಸಿಸಿ ಟೆಸ್ಟ್ ಪಂದ್ಯದ ನಂತರ ಕ್ರಿಕೆಟಿಗೆ ವಿದಾಯ ಹೇಳುತ್ತಿದ್ದಾರೆ ಬಿ.ಜೆ ವ್ಯಾಟ್ಲಿಂಗ್

Jayashree Aryapu   ¦    May 13, 2021 04:33:43 PM (IST)
ಐಸಿಸಿ ಟೆಸ್ಟ್ ಪಂದ್ಯದ ನಂತರ ಕ್ರಿಕೆಟಿಗೆ ವಿದಾಯ ಹೇಳುತ್ತಿದ್ದಾರೆ ಬಿ.ಜೆ ವ್ಯಾಟ್ಲಿಂಗ್

ವೆಲ್ಲಿಂಗ್ಟನ್‌: ನ್ಯೂಜಿಲೆಂಡ್‌ನ ವಿಕೆಟ್‌ ಕೀಪರ್‌ ಬ್ಯಾಟ್ಸ್‌ಮನ್‌ ಬಿ.ಜೆ.ವ್ಯಾಟ್ಲಿಂಗ್‌, ಮುಂದಿನ ತಿಂಗಳು ಇಂಗ್ಲೆಂಡ್‌ನಲ್ಲಿ ಭಾರತ ವಿರುದ್ಧ ನಡೆಯಲಿರುವ ಐಸಿಸಿ ವಿಶ್ವ ಟೆಸ್ಟ್‌ ಚಾಂಪಿಯನ್‌ಶಿಪ್‌ ಫೈನಲ್‌ ಪಂದ್ಯದ ಬಳಿಕ ಎಲ್ಲಾ ಮಾದರಿಯ ಕ್ರಿಕೆಟ್‌ನಿಂದ ನಿವೃತ್ತಿ ಪಡೆಯುವುದಾಗಿ ಘೋಷಿಸಿದ್ದಾರೆ.

ನಾನು ನಿವೃತ್ತಿ ಪಡೆಯಲು ಇದು ಸರಿಯಾದ ಸಮಯವೆನಿಸುತ್ತಿದೆ. ನ್ಯೂಜಿಲೆಂಡ್ ತಂಡವನ್ನು ಅದರಲ್ಲೂ ಟೆಸ್ಟ್ ಜೆರ್ಸಿಯೊಂದಿಗೆ ಆಡುವುದು ನನಗೆ ಸಿಕ್ಕ ಅತಿದೊಡ್ಡ ಗೌರವ. ಬಿಳಿ ಜೆರ್ಸಿಯೊಂದಿಗಿನ ಪ್ರತಿಕ್ಷಣವನ್ನು ನಾನು ಎಂಜಾಯ್ ಮಾಡಿದ್ದೇನೆ ಎಂದು ವ್ಯಾಟ್ಲಿಂಗ್ ತಿಳಿಸಿದ್ದಾರೆ. ಇಂಗ್ಲೆಂಡ್‌ ವಿರುದ್ದದ 2 ಟೆಸ್ಟ್‌ ಹಾಗೂ ಐಸಿಸಿ ಟೆಸ್ಟ್‌ ಚಾಂಪಿಯನ್‌ಶಿಪ್‌ ಫೈನಲ್‌ ಬಳಿಕ ವ್ಯಾಟ್ಲಿಂಗ್ ಎಲ್ಲಾ ಮಾದರಿಯ ಕ್ರಿಕೆಟ್‌ನಿಂದ ವಿದಾಯ ಹೊಂದಲಿದ್ದಾರೆ.

35 ವರ್ಷದ ವ್ಯಾಟ್ಲಿಂಗ್‌ ಕಳೆದೊಂದು ದಶಕದಿಂದ ನ್ಯೂಜಿಲೆಂಡ್‌ ಟೆಸ್ಟ್‌ ತಂಡದ ಪ್ರಮುಖ ಸದಸ್ಯರಾಗಿದ್ದು, ವಿಶ್ವ ಶ್ರೇಷ್ಠ ವಿಕೆಟ್‌ ಕೀಪರ್‌ ಬ್ಯಾಟ್ಸ್‌ಮನ್‌ಗಳ ಪೈಕಿ ಒಬ್ಬರೆನಿಸಿಕೊಂಡಿದ್ದಾರೆ. ಅಲ್ಲದೇ ಹಲವಾರು ದಾಖಲೆಗಳನ್ನು ಸಹ ಬರೆದಿದ್ದಾರೆ. ಐಸಿಸಿ ಟೆಸ್ಟ್ ಚಾಂಪಿಯನ್‌ ಫೈನಲ್‌ ಪಂದ್ಯವು ಜೂನ್ 18 ರಿಂದ 22ರವರೆಗೆ ಸೌಥಾಂಪ್ಟನ್‌ನಲ್ಲಿ ನಡೆಯಲಿದೆ.

ವ್ಯಾಟ್ಲಿಂಗ್‌ ತಮ್ಮ ವಿದಾಯಕ್ಕೂ ಮುನ್ನ ಟೆಸ್ಟ್ ಕ್ರಿಕೆಟ್‌ನಲ್ಲಿ ಅತಿಹೆಚ್ಚು ಬಲಿ ಪಡೆದ ನ್ಯೂಜಿಲೆಂಡ್ ವಿಕೆಟ್ ಕೀಪರ್, ಕಿವೀಸ್‌ ಪರ ಟೆಸ್ಟ್ ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ರನ್‌ ಬಾರಿಸಿದ ವಿಕೆಟ್ ಕೀಪರ್‌ ಬ್ಯಾಟ್ಸ್‌ಮನ್(3773) ಹಾಗೂ ಟೆಸ್ಟ್ ಕ್ರಿಕೆಟ್‌ನಲ್ಲಿ ವೈಯುಕ್ತಿಕ ಗರಿಷ್ಠ ರನ್‌ ಬಾರಿಸಿದ ವಿಕೆಟ್‌ ಕೂಪರ್‌ ಬ್ಯಾಟ್ಸ್‌ಮನ್(205) ಹಾಗೂ ನ್ಯೂಜಿಲೆಂಡ್ ಪರ ಟೆಸ್ಟ್ ಕ್ರಿಕೆಟ್‌ನಲ್ಲಿ ಗರಿಷ್ಠ ಶತಕ(07) ಬಾರಿಸಿದ ವಿಕೆಟ್‌ ಕೀಪರ್‌ ಬ್ಯಾಟ್ಸ್‌ಮನ್ ಎನ್ನುವ ದಾಖಲೆಯನ್ನು ನಿರ್ಮಿಸಿದ್ದಾರೆ.