ಧೋನಿಯಿಂದ ಟೆಸ್ಟ್ ಕ್ಯಾಪ್ ಪಡೆದಿರುವುದು ವಿಶೇಷ ಕ್ಷಣ: ಕೆಎಲ್ ರಾಹುಲ್

ಧೋನಿಯಿಂದ ಟೆಸ್ಟ್ ಕ್ಯಾಪ್ ಪಡೆದಿರುವುದು ವಿಶೇಷ ಕ್ಷಣ: ಕೆಎಲ್ ರಾಹುಲ್

HSA   ¦    May 11, 2020 04:18:45 PM (IST)
ಧೋನಿಯಿಂದ ಟೆಸ್ಟ್ ಕ್ಯಾಪ್ ಪಡೆದಿರುವುದು ವಿಶೇಷ ಕ್ಷಣ: ಕೆಎಲ್ ರಾಹುಲ್

ಬೆಂಗಳೂರು: ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ಅವರಿಂದ ಟೆಸ್ಟ್ ಕ್ಯಾಪ್ ಪಡೆದಿರುವುದು ನನ್ನ ಜೀವನದ ತುಂಬಾ ವಿಶೇಷ ಹಾಗೂ ಭಾವನಾತ್ಮಕ ಕ್ಷಣ ಎಂದು ಆರಂಭಿಕ ಆಟಗಾರ ಕೆ.ಎಲ್. ರಾಹುಲ್ ತಿಳಿಸಿದ್ದಾರೆ.

ವಿಶ್ವದೆಲ್ಲೆಡೆಯಲ್ಲಿ ಕೊರೋನಾ ವೈರಸ್ ನಿಂದಾಗಿ ಕ್ರಿಕೆಟ್ ಕೂಡ ಸ್ತಬ್ದವಾಗಿದ್ದು, ತನ್ನ ಅಭಿಮಾನಿಗಳ ಪ್ರಶ್ನೆಗಳಿಗೆ ಉತ್ತರಿಸುತ್ತಾ ಅವರು ಈ ರೀತಿ ಹೇಳಿದರು. ಟ್ವಿಟ್ಟರ್ ನಲ್ಲಿ ಅಭಿಮಾನಿಗಳ ಪ್ರಶ್ನೆಗೆ ರಾಹುಲ್ ಅವರು ಉತ್ತರಿಸಿದರು.

2014ರಲ್ಲಿ ಆಸ್ಟ್ರೇಲಿಯಾದಲ್ಲಿ ಟೆಸ್ಟ್ ಗೆ ಪಾದಾರ್ಪಣೆ ಮಾಡುತ್ತೇನೆ ಎಂದು ಯಾವತ್ತೂ ಯೋಚಿಸಿರಲಿಲ್ಲ. ಆದರೆ ಧೋನಿ ಅವರಿಂದ ಟೆಸ್ಟ್ ಕ್ಯಾಪ್ ಪಡೆದಿರುವುದು ತುಂಬಾ ವಿಶೇಷ ಕ್ಷಣ ಎಂದರು.