ವಿಂಡೀಸ್ ವಿರುದ್ಧದ ಏಕದಿನ ಸರಣಿಗೆ ವೇಗಿ ಭುವನೇಶ್ವರ್ ಕುಮಾರ್ ಅಲಭ್ಯ

ವಿಂಡೀಸ್ ವಿರುದ್ಧದ ಏಕದಿನ ಸರಣಿಗೆ ವೇಗಿ ಭುವನೇಶ್ವರ್ ಕುಮಾರ್ ಅಲಭ್ಯ

HSA   ¦    Dec 14, 2019 03:40:13 PM (IST)
ವಿಂಡೀಸ್ ವಿರುದ್ಧದ ಏಕದಿನ ಸರಣಿಗೆ ವೇಗಿ ಭುವನೇಶ್ವರ್ ಕುಮಾರ್ ಅಲಭ್ಯ

ನವದೆಹಲಿ: ವೆಸ್ಟ್ ಇಂಡೀಸ್ ವಿರುದ್ಧದ ಏಕದಿನ ಸರಣಿಗೆ ಮೊದಲು ಟೀಂ ಇಂಡಿಯಾಗೆ ಗಾಯಾಳು ಸಮಸ್ಯೆ ಎದುರಾಗಿದ್ದು, ವೇಗಿ ಭುವನೇಶ್ವರ್ ಕುಮಾರ್ ಅವರು ಮೂರು ಪಂದ್ಯಗಳ ಸರಣಿಯಿಂದ ಹೊರಗುಳಿಯುವರು.

ಭುವನೇಶ್ವರ್ ಕುಮಾರ್ ಬದಲಿಗೆ ವೇಗಿ ಶ್ರಾದುಲ್ ಠಾಕೂರ್ ಅವರು ಆಡಲಿದ್ದಾರೆ. ಭುವಿಗೆ ವೆಸ್ಟ್ ಇಂಡೀಸ್ ವಿರುದ್ಧದ ಮೂರನೇ ಹಾಗೂ ಕೊನೆಯ ಟಿ-20 ಪಂದ್ಯದ ವೇಳೆ ಬಲದ ತೊಡೆ ನೋವಿಗೆ ಒಳಗಾಗಿದ್ದರು.

ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ(ಬಿಸಿಸಿಐ) ಕೂಡ ಈ ಬಗ್ಗೆ ದೃಢಪಡಿಸಿದೆ. ಭುವಿ ಏಕದಿನ ಸರಣಿಗೆ ಅಲಭ್ಯವಾಗಲಿರುವರು. ಅವರ ಬದಲಿಗೆ ಶ್ರಾದುಲ್ ಠಾಕೂರ್ ಆಡುವರು ಎಂದು ಬಿಸಿಸಿಐ ಟ್ವೀಟ್ ಮಾಡಿದೆ.

ಈಗಾಗಲೇ ಆರಂಭಿಕ ಆಟಗಾರ ಶಿಖರ್ ಧವನ್ ಕೂಡ ಗಾಯಾಳು ಸಮಸ್ಯೆಯಿಂದ ಹೊರಗುಳಿದಿರುವರು. ಮೊದಲ ಏಕದಿನ ಪಂದ್ಯವು ಡಿಸೆಂಬರ್ 15ರಂದು ಚೆನ್ನೈಯ ಎಂಎ ಚಿದಂಬರಂ ಸ್ಟೇಡಿಯಂನಲ್ಲಿ ನಡೆಯಲಿದೆ.