ಸ್ಟೀಪಲ್ ಚೇಸ್ ನಲ್ಲಿ ಒಲಿಂಪಿಕ್ಸ್ ಗೆ ಅರ್ಹತೆ ಪಡೆದ ಅವಿನಾಶ್ ಸಾಬ್ಲೆ

ಸ್ಟೀಪಲ್ ಚೇಸ್ ನಲ್ಲಿ ಒಲಿಂಪಿಕ್ಸ್ ಗೆ ಅರ್ಹತೆ ಪಡೆದ ಅವಿನಾಶ್ ಸಾಬ್ಲೆ

HSA   ¦    Oct 05, 2019 05:24:13 PM (IST)
ಸ್ಟೀಪಲ್ ಚೇಸ್ ನಲ್ಲಿ ಒಲಿಂಪಿಕ್ಸ್ ಗೆ ಅರ್ಹತೆ ಪಡೆದ ಅವಿನಾಶ್ ಸಾಬ್ಲೆ

ದೋಹಾ: ಇಲ್ಲಿ ನಡೆಯುತ್ತಿರುವ ವಿಶ್ವ ಅಥ್ಲೆಟಿಕ್ ಚಾಂಪಿಯನ್ ಶಿಪ್ ಸ್ಟೀಪಲ್ ಚೇಸ್ ನ ಫೈನಲ್ ನಲ್ಲಿ 13ನೇ ಸ್ಥಾನ ಪಡೆದ ಭಾರತದ ಅವಿನಾಶ್ ಸಾಬ್ಲೆ 2020ರಲ್ಲಿ ನಡೆಯಲಿರುವ ಟೊಕಿಯೊ ಒಲಿಂಪಿಕ್ಸ್ ಗೆ ಸ್ಥಾನ ಪಡೆದಿದ್ದಾರೆ.

ಒಲಿಂಪಿಕ್ಸ್ ಗೆ ಅರ್ಹತೆ ಪಡೆಯಲು 8:22:00 ನಿಮಿಷದಲ್ಲಿ ಗುರಿ ಮುಟ್ಟಬೇಕಿತ್ತು. ಸಾಬ್ಲೆ 8:21:37 ನಿಮಿಷದಲ್ಲಿ ಗುರಿಮುಟ್ಟಿ ಹೊಸ ರಾಷ್ಟ್ರೀಯ ದಾಖಲೆಯೊಂದಿಗೆ ಅರ್ಹತೆ ಪಡೆದುಕೊಂಡಿದ್ದಾರೆ.

ಭಾರತೀಯ ಕ್ರೀಡಾ ಪ್ರಾಧಿಕಾರ(ಸಾಯಿ) ಸಾಬ್ಲೆ ಅವರ ಸಾಧನೆಗೆ ಟ್ವಿಟ್ಟರ್ ನಲ್ಲಿ ಅಭಿನಂದನೆ ಸಲ್ಲಿಸಿದೆ.