ಪ್ರತೀ ಸರಣಿಯಲ್ಲಿ ಒಂದು ಪಿಂಕ್ ಬಾಲ್ ಟೆಸ್ಟ್: ಗಂಗೂಲಿ

ಪ್ರತೀ ಸರಣಿಯಲ್ಲಿ ಒಂದು ಪಿಂಕ್ ಬಾಲ್ ಟೆಸ್ಟ್: ಗಂಗೂಲಿ

HSA   ¦    Dec 03, 2019 03:03:06 PM (IST)
ಪ್ರತೀ ಸರಣಿಯಲ್ಲಿ ಒಂದು ಪಿಂಕ್ ಬಾಲ್ ಟೆಸ್ಟ್: ಗಂಗೂಲಿ

ನವದೆಹಲಿ: ಪಿಂಕ್ ಬಾಲ್ ಟೆಸ್ಟ್ ಪಂದ್ಯವನ್ನು ಪ್ರತೀ ಸರಣಿಯಲ್ಲಿ ಒಂದರಂತೆ ವಿರಾಟ್ ಕೊಹ್ಲಿ ಬಳಗವು ಆಡಬೇಕಾಗಿದೆ ಎಂದು ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ(ಬಿಸಿಸಿಐ)ಅಧ್ಯಕ್ಷ ಸೌರವ್ ಗಂಗೂಲಿ ಹೇಳಿದರು.

ಕಳೆದ ತಿಂಗಳು ಬಾಂಗ್ಲಾದೇಶ ವಿರುದ್ಧ ಈಡನ್ ಗಾರ್ಡನ್ ನಲ್ಲಿ ಪಿಂಕ್ ಬಾಲ್ ಟೆಸ್ಟ್ ಪಂದ್ಯಕ್ಕಾಗಿ ಡೇ ನೈಟ್ ಟೆಸ್ಟ್ ಪಂದ್ಯವನ್ನು ಆಯೋಜಿಸಿದ್ದ ಬಿಸಿಸಿಐ ಟೆಸ್ಟ್ ಆಡುವ ರಾಷ್ಟ್ರಗಳಲ್ಲಿ ಇದನ್ನು ಅಳವಡಿಸಿಕೊಂಡ ಕೊನೆಯ ರಾಷ್ಟ್ರವಾಗಿದೆ.

ನಾನು ಇದರ ಬಗ್ಗೆ ತುಂಬಾ ಆಶಾವಾದದಿಂದ ಇದ್ದೇನೆ. ಇದು ಮುಂದಿನ ಹಾದಿ. ಪ್ರತಿಯೊಂದು ಟೆಸ್ಟ್ ಅಲ್ಲ, ಆದರೆ ಸರಣಿಯಲ್ಲಿ ಒಂದು ಟೆಸ್ಟ್ ನ್ನು ಆಡಬಹುದು ಎಂದು ಗಂಗೂಲಿ ತಿಳಿಸಿದ್ದಾರೆ.