ಲಂಡನ್ ಗೆ ತೆರಳಿದ ಭಾರತದ ಪುರುಷ ಹಾಗೂ ಮಹಿಳೆಯರ ಕ್ರಿಕೆಟ್ ತಂಡಗಳು

ಲಂಡನ್ ಗೆ ತೆರಳಿದ ಭಾರತದ ಪುರುಷ ಹಾಗೂ ಮಹಿಳೆಯರ ಕ್ರಿಕೆಟ್ ತಂಡಗಳು

Ms   ¦    Jun 03, 2021 06:51:47 PM (IST)
ಲಂಡನ್ ಗೆ ತೆರಳಿದ ಭಾರತದ ಪುರುಷ ಹಾಗೂ ಮಹಿಳೆಯರ ಕ್ರಿಕೆಟ್ ತಂಡಗಳು

ಲಂಡನ್: ಇನ್ನೇನು ಕೆಲವು ದಿನಗಳಲ್ಲಿ ಕ್ರಿಕೆಟ್ ಸರಣಿಗಳು ಪ್ರಾರಂಭವಾಗಲಿದ್ದು, ಇದಕ್ಕಾಗಿ ಭಾರತದ ಪುರುಷ ಮತ್ತು ಮಹಿಳಾ ತಂಡಗಳು ಇಂದು ಲಂಡನ್ ಗೆ ತೆರಳಿದೆ.

 

ಲಂಡನ್ ಗೆ ಬಂದಿಳಿದ ತಂಡ ಅಲ್ಲಿಂದ ಸೌಥಂಪ್ಟನ್ ಗೆ ಪ್ರಯಾಣ ಬೆಳೆಸಿದೆ. ಉಭಯ ತಂಡಗಳು ಮುಂಬೈನಲ್ಲಿ 14 ದಿನಗಳ ಕ್ವಾರಂಟೈನ್ ವಾಸ ಮುಗಿಸಿ, ಕೋವಿಡ್ ಪರೀಕ್ಷೆಗೆ ಒಳಪಟ್ಟು ಲಂಡನ್ ವಿಮಾನ ಹತ್ತಿದ್ದರು. ಇದೀಗ ಸೌಥಂಪ್ಟನ್ ನಲ್ಲಿ ಕ್ವಾರಂಟೈನ್ ಗೆ ಒಳಪಡಬೇಕಿದೆ. ಈ ಸಮಯದಲ್ಲೂ ಕೋವಿಡ್ ಪರೀಕ್ಷೆಗೆ ತಂಡ ಒಳಪಡಲಿದೆ.

 

ವಿರಾಟ್ ಬಳಗ ನ್ಯೂಜಿಲ್ಯಾಂಡ್ ವಿರುದ್ಧ ಜೂನ್ 18ರಂದು ಸೌಥಂಪ್ಟನ್ ನ ಏಜಸ್ ಬೌಲ್ ಅಂಗಳದಲ್ಲಿ ಚೊಚ್ಚಲ ವಿಶ್ವ ಟೆಸ್ಟ್ ಚಾಂಪಿಯನ್ ಶಿಪ್ ಪಂದ್ಯವಾಡಲಿದೆ. ನಂತರ ಸುಮಾರು 40 ದಿನಗಳ ಬ್ರೇಕ್ ನ ಬಳಿಕ ಇಂಗ್ಲೆಂಡ್ ವಿರುದ್ದ ಟೆಸ್ಟ್ ಸರಣಿ ಆಡಲಿದೆ.

 

ಇನ್ನು ವನಿತೆಯರ ತಂಡ ಇಂಗ್ಲೆಂಡ್ ವಿರುದ್ಧ ಒಂದು ಟೆಸ್ಟ್, ಮೂರು ಏಕದಿನ ಮತ್ತು ಮೂರು ಟಿ20 ಪಂದ್ಯವಾಡಲಿದ್ದು, ಈ ಸರಣಿ ಜೂನ್ 16ರಿಂದ ಪ್ರಾರಂಭವಾಗಲಿದೆ.