ತಂಡ ನಿರ್ಭೀತಿಯಿಂದ ಆಡುವುದನ್ನು ಮುಂದವರಿಸಬೇಕು: ವೇಗಿ ಶಿಖಾ ಪಾಂಡೆ

ತಂಡ ನಿರ್ಭೀತಿಯಿಂದ ಆಡುವುದನ್ನು ಮುಂದವರಿಸಬೇಕು: ವೇಗಿ ಶಿಖಾ ಪಾಂಡೆ

HSA   ¦    Feb 25, 2020 02:42:28 PM (IST)
ತಂಡ ನಿರ್ಭೀತಿಯಿಂದ ಆಡುವುದನ್ನು ಮುಂದವರಿಸಬೇಕು: ವೇಗಿ ಶಿಖಾ ಪಾಂಡೆ

ಮೆಲ್ಬೊರ್ನ್: ಟಿ-20 ವಿಶ್ವಕಪ್ ನಲ್ಲಿ ಬಾಂಗ್ಲಾದೇಶ ವಿರುದ್ಧ 18 ರನ್ ಗಳ ಗೆಲುವು ದಾಖಲಿಸಿಕೊಂಡ ಭಾರತದ ಮಹಿಳೆಯರು ಇದೇ ರೀತಿಯಾಗಿ ನಿರ್ಭೀತಿಯಿಂದ ಆಡಬೇಕಾಗಿದೆ ಎಂದು ವೇಗಿ ಶಿಖಾ ಪಾಂಡೆ ಕರೆ ನೀಡಿದರು.

ನಿನ್ನೆ ಇಲ್ಲಿನ ವಾಕಾ ಕ್ರಿಕೆಟ್ ಮೈದಾಣದಲ್ಲಿ ನಡೆದ ಪಂದ್ಯದಲ್ಲಿ ಭಾರತದ ಮಹಿಳೆಯರು 18 ರನ್ ಗಳಿಂದ ಬಾಂಗ್ಲಾದ ಮಹಿಳೆಯರನ್ನು ಪರಾಭವಗೊಳಿಸಿದ್ದರು.

ಮೊದಲು ಬ್ಯಾಟಿಂಗ್ ಮಾಡಿದ ಭಾರತ ಶಫಾಲಿ ವರ್ಮಾ 17 ರನ್ ಗಳಲ್ಲಿ ಬಾರಿಸಿದ 39 ರನ್ ನೆರವಿನಿಂದ ಆರು ವಿಕೆಟ್ ನಷ್ಟಕ್ಕೆ 142 ರನ್ ಬಾರಿಸಿತು. ವರ್ಮಾ ನಾಲ್ಕು ಸಿಕ್ಸರ್ ಬಾರಿಸಿ ಭರ್ಜರಿ ಬ್ಯಾಟಿಂಗ್ ಪ್ರದರ್ಶಿಸಿದ್ದರು.

ಜೆಮಿಮ್ಹಾ ರೋಡ್ರಿಗಸ್ ಕೂಡ 34 ಎಸೆತಗಳಲ್ಲಿ 37 ರನ್ ಬಾರಿಸಿ ತಂಡದ ಉತ್ತಮ ಮೊತ್ತಕ್ಕೆ ಕಾರಣವಾದರು.

ಯಾವುದೇ ಬದಲಾವಣೆ ಮಾಡಲು ನಾವು ವರ್ಮಾಗೆ ಸೂಚಿಸಿಲ್ಲ. ತನ್ನ ಶೈಲಿಯ ಕ್ರಿಕೆಟ್ ಆಡಲು ಆಕೆಗೆ ಅನುಮತಿ ನೀಡಲಾಗಿದೆ ಎಂದು ಪಾಂಡೆ ಹೇಳಿದರು.

16ರ ಹರೆಯದಲ್ಲಿ ಈ ರೀತಿಯ ಬ್ಯಾಟಿಂಗ್ ಅದ್ಭುತವಾಗಿದೆ. ಯುವ ಮತ್ತು ನಿರ್ಭೀತಿಯಿಂದ ಆಡುವಂತಹ ಆಟಗಾರ್ತಿಯರು ತಂಡದಲ್ಲಿ ಇರುವುದು ಸಂತಸ ನೀಡಿದೆ ಎಂದು ಪಾಂಡೆ ತಿಳಿಸಿದರು.