ಅಫ್ರಿದಿ ಫೌಂಡೇಶನ್ ಗೆ ದೇಣಿಗೆ ನೀಡಲು ಸೂಚಿಸಿದ ಯುವರಾಜ್ ಗೆ ಮಂಗಳಾರತಿ

ಅಫ್ರಿದಿ ಫೌಂಡೇಶನ್ ಗೆ ದೇಣಿಗೆ ನೀಡಲು ಸೂಚಿಸಿದ ಯುವರಾಜ್ ಗೆ ಮಂಗಳಾರತಿ

HSA   ¦    Apr 01, 2020 03:07:20 PM (IST)
ಅಫ್ರಿದಿ ಫೌಂಡೇಶನ್ ಗೆ ದೇಣಿಗೆ ನೀಡಲು ಸೂಚಿಸಿದ ಯುವರಾಜ್ ಗೆ ಮಂಗಳಾರತಿ

ನವದೆಹಲಿ: ಕೊರೋನಾ ವೈರಸ್ ನಿಂದ ಬಳಲುತ್ತಿರುವ ಪಾಕಿಸ್ತಾನದಲ್ಲಿ ಕೂಡ ಕ್ರಿಕೆಟಿಗ ಶಹೀದ್ ಅಫ್ರಿದಿ ಫೌಂಡೇಶನ್ ನೆರವಾಗುತ್ತಿದ್ದು, ಆ ಫೌಂಡೇಶನ್ ಗೆ ನೆರವಾಗಿ ಎಂದು ಭಾರತೀಯರಲ್ಲಿ ಮನವಿ ಮಾಡಿಕೊಂಡ ಮಾಜಿ ಕ್ರಿಕೆಟಿಗ ಯುವರಾಜ್ ಸಿಂಗ್ ಗೆ ಅಭಿಮಾನಿಗಳು ಸರಿಯಾಗಿ ಮಂಗಳಾರತಿ ಮಾಡಿದ್ದಾರೆ.

ಯುವರಾಜ್ ಗೆ ಮೊದಲು ಹರ್ಭಜನ್ ಸಿಂಗ್ ಕೂಡ ಇದೇ ರೀತಿಯಲ್ಲಿ ಅಫ್ರಿದಿ ಫೌಂಡೇಶನ್ ಗೆ ನೆರವಾಗುವಂತೆ ಹೇಳಿದ್ದರು. ಆದರೆ ಇದರಿಂದ ಕ್ರಿಕೆಟ್ ಅಭಿಮಾನಿಗಳು ರೊಚ್ಚಿಗೆದ್ದಿದ್ದಾರೆ.

ಯುವರಾಜ್ ಸಿಂಗ್ ಟ್ವೀಟ್ ಮಾಡುತ್ತಾ, ನಾನು ಅಫ್ರಿದಿ ಫೌಂಡೇಶನ್ ಗೆ ನೆರವಾಗಿದ್ದೇನೆ. ನೀವು ಕೂಡ ನೆರವಾಗಿ ಎಂದು ಬರೆದಿದ್ದರು.

ನಿಮ್ಮ ಅಭಿಮಾನಿ ಎಂದು ಹೇಳಿಕೊಳ್ಳಲು ನನಗೆ ನಾಚಿಕೆಯಾಗುತ್ತಿದೆ ಎಂದು  ಅಭಿಮಾನಿಯೊಬ್ಬ ಬರೆದುಕೊಂಡಿದ್ದಾನೆ.

ಇದೇ ವೇಳೆ ಇನ್ನೊಬ್ಬ, ನಾನು ಶ್ರಮಪಟ್ಟು ದುಡಿದಿರುವ ಹಣವನ್ನು ನಮ್ಮ ಮೇಲೆ ಉಗ್ರರ ದಾಳಿ ಮಾಡುವ ಪಾಕಿಸ್ತಾನಕ್ಕೆ ಕೊಡಬೇಕಾ? ನಿಮ್ಮ ಮೇಲಿದ್ದ ಎಲ್ಲಾ ಗೌರವ ಹೋಗಿದೆ ಎಂದು ಇನ್ನೊಬ್ಬ ಬರೆದಿದ್ದಾನೆ.