ಒಂದೇ ಓವರ್ ನಲ್ಲಿ ಐದು ವಿಕೆಟ್ ಉರುಳಿಸಿದ ಅಭಿಮನ್ಯು ಮಿಥುನ್

ಒಂದೇ ಓವರ್ ನಲ್ಲಿ ಐದು ವಿಕೆಟ್ ಉರುಳಿಸಿದ ಅಭಿಮನ್ಯು ಮಿಥುನ್

HSA   ¦    Nov 29, 2019 05:30:23 PM (IST)
ಒಂದೇ ಓವರ್ ನಲ್ಲಿ ಐದು ವಿಕೆಟ್ ಉರುಳಿಸಿದ ಅಭಿಮನ್ಯು ಮಿಥುನ್

ಸೂರತ್: ಕನ್ನಡಿಗ ಅಭಿಮನ್ಯು ಮಿಥುನ್ ಒಂದೇ ಓವರ್ ನಲ್ಲಿ ಐದು ವಿಕೆಟ್ ಉರುಳಿಸಿ ಹೊಸ ದಾಖಲೆಯೊಂದನ್ನು ಬರೆದಿದ್ದಾರೆ.

ಇಲ್ಲಿ ನಡೆಯುತ್ತಿರುವ ಹರಿಯಾಣ ವಿರುದ್ಧದ ಸಯ್ಯದ್ ಮುಷ್ತಾಕ್ ಅಲಿ ಟೂರ್ನಿಯ ಸೆಮಿಫೈನಲ್ ಪಂದ್ಯದಲ್ಲಿ ಮಿಥುನ್ ಈ ದಾಖಲೆ ಮಾಡಿದರು.

ಮೂರು ಓವರ್ ಗಳಲ್ಲಿ ಒಂದೂ ವಿಕೆಟ್ ಪಡೆಯದ ಮಿಥುನ್ ಅಂತಿಮ ಓವರ್ ನಲ್ಲಿ ಹ್ಯಾಟ್ರಿಕ್ ಸಹಿತ ಐದು ವಿಕೆಟ್ ಉರುಳಿಸಿದರು. ಹಿಮಾಂಶು ರಾಣಾ, ರಾಹುಲ್ ತಿವಾಟಿಯಾ, ಸುಮಿತ್ ಕುಮಾರ್, ಅಮಿತ್ ಮಿಶ್ರಾ, ಜಿತೇಶ್ ಸರೋಹಾ ವಿಕೆಟ್ ಮಿಥುನ್ ಪಾಲಾಯಿತು. ಹರಿಯಾಣ 20 ಓವರ್ ಗಳಲ್ಲಿ 194 ಪೇರಿಸಿದೆ.