ಬಾಲ್ಯ ಸ್ನೇಹಿತನಿಗೆ ಧನ್ಯವಾದ ತಿಳಿಸಿದ ಗಂಗೂಲಿ

ಬಾಲ್ಯ ಸ್ನೇಹಿತನಿಗೆ ಧನ್ಯವಾದ ತಿಳಿಸಿದ ಗಂಗೂಲಿ

MS   ¦    Jan 07, 2021 06:09:41 PM (IST)
ಬಾಲ್ಯ ಸ್ನೇಹಿತನಿಗೆ ಧನ್ಯವಾದ ತಿಳಿಸಿದ ಗಂಗೂಲಿ

ಕೋಲ್ಕತಾ: ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಅಧ್ಯಕ್ಷ ಸೌರವ್ ಗಂಗೂಲಿ ತಮ್ಮ ಬಾಲ್ಯದ ಗೆಳೆಯ ಜಾಯ್ ದೀಪ್ ಇನ್ ಸ್ಟಾಗ್ರಾಮ್ ಮೂಲಕ ಧನ್ಯವಾದಗಳನ್ನು ತಿಳಿಸಿದ್ದಾರೆ.

ಲಘು ಹೃದಯಾಘಾತದಿಂದ ಆಯಂಜಿಯೊಪ್ಲಾಸ್ಟಿ ಚಿಕಿತ್ಸೆಯನ್ನು ಕೋಲ್ಕತ್ತಾದ ಖಾಸಗಿ ಆಸ್ಪತ್ರೆಯಲ್ಲಿ ಪಡೆದು ಗುಣಮುಖರಾಗಿ ಹೊರಬಂದಿರುವ ಅವರು ಗೆಳಯನ ಕುರಿತು ಇನ್ ಸ್ಟಾಗ್ರಾಮ್ ನಲ್ಲಿ ಪೋಸ್ಟ್ ಮಾಡಿದ್ದು, ಕಳೆದ 5 ದಿನಗಳಿಂದ ನೀನು ನನಗೆ ಮಾಡಿದ್ದನ್ನು ನನ್ನ ಜೀವ ಇರುವವರೆಗೂ ಮರೆಯುವುದಿಲ್ಲ. ಕಳೆದ 40 ವರ್ಷಗಳಿಂದ ನಮ್ಮಿಬ್ಬರ ಪರಿಚಯವಿದ್ದು, ಕುಟುಂಬದ ಸಂಬಂಧಗಳಿಗಿಂತಲೂ ಮಿಗಿಲಾದ ಸಂಬಂಧ ನಮ್ಮಿಬ್ಬರ ನಡುವೆ ಬೆಳೆದಿದೆ ಎಂದು ಮನದಾಳದ ಮಾತುಗಳನ್ನು ಹಂಚಿಕೊಂಡಿದ್ದಾರೆ.

ಇದರೊಂದಿಗೆ ಮಾಧ್ಯಮಗಳೊಂದಿಗೆ ಮಾತನಾಡಿದ ಗಂಗೂಲಿ, ಅದಕ್ಕೆ ಚಿಕಿತ್ಸೆ ನೀಡಿದ ವೈದ್ಯರಿಗೆ ಹಾಗೂ ಅವರಿಗಾಗಿ ಬೇಡಿಕೊಂಡ ಎಲ್ಲರಿಗೂ ಧನ್ಯವಾದ ತಿಳಿಸಿದರು. ಅಂತೆಯೇ ತಾನು ಗುಣಮುಖನಾಗಿ ಇರುವುದರ ಬಗ್ಗೆ ಹಾಗೂ ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚುತ್ತದೆ ಚೇತರಿಸಿಕೊಳ್ಳುವುದಾಗಿ ತಿಳಿಸಿದರು.