ಭಾರತದ ವೇಗಿಗಳಿಗೆ ವ್ಯಾಗ್ನರ್ ಎಸೆದಂತೆ ಬೌನ್ಸರ್ ಎಸೆಯಲಾಗದು: ವೇಡ್

ಭಾರತದ ವೇಗಿಗಳಿಗೆ ವ್ಯಾಗ್ನರ್ ಎಸೆದಂತೆ ಬೌನ್ಸರ್ ಎಸೆಯಲಾಗದು: ವೇಡ್

HSA   ¦    Jul 31, 2020 04:45:07 PM (IST)
ಭಾರತದ ವೇಗಿಗಳಿಗೆ ವ್ಯಾಗ್ನರ್ ಎಸೆದಂತೆ ಬೌನ್ಸರ್ ಎಸೆಯಲಾಗದು: ವೇಡ್

ಮೆಲ್ಬೊರ್ನ್: ನ್ಯೂಜಿಲೆಂಡ್ ವೇಗಿ ನೀಲ್ ವ್ಯಾಗ್ನರ್ ರಂತೆ ಭಾರತದ ವೇಗಿಗಳು ಬೌನ್ಸರ್ ಎಸೆಯಲು ಆಗದು ಎಂದು ಆಸ್ಟ್ರೇಲಿಯಾದ ವಿಕೆಟ್ ಕೀಪರ್ ಮ್ಯಾಥ್ಯೂ ವೇಡ್ ಅಭಿಪ್ರಾಯಪಟ್ಟಿರುವುರು.

ಕಳೆದ ವರ್ಷ ನ್ಯೂಜಿಲೆಂಡ್ ನ ವೇಗಿ ವೆಗ್ನರ್ ಅವರು ಆಸ್ಟ್ರೇಲಿಯಾದ ಪ್ರಮುಖ ಬ್ಯಾಟ್ಸ್ ಮೆನ್ ಗಳಾದ ಸ್ಟೀವ್ ಸ್ಮಿತ್, ಡೇವಿಡ್ ವಾರ್ನರ್ ಸಹಿತ ಕೆಲವು ಪ್ರಮುಖ ವಿಕೆಟ್ ಗಳನ್ನು ಉರುಳಿಸಿದ್ದರು. ಇದರಿಂದ ನ್ಯೂಜಿಲೆಂಡ್ ಟೆಸ್ಟ್ ಸರಣಿಯಲ್ಲಿ ಸ್ವಲ್ಪ ಮಟ್ಟಿನ ಗೌರವ ಪಡೆದುಕೊಂಡಿತ್ತು.

ಮುಂದಿನ ದಿನಗಳಲ್ಲಿ ಭಾರತವು ನ್ಯೂಜಿಲೆಂಡ್ ಪ್ರವಾಸಗೈಯಲಿದೆ. ಈ ವೇಳೆ ವೆಗ್ನರ್ ತುಂಬಾ ಪರಿಣಾಮಕಾರಿ ಬೌನ್ಸರ್ ಗಳನ್ನು ಎಸೆಯುವರು ಎಂದು ವೇಡ್ ಹೇಳಿದರು.