ಶ್ರೀಲಂಕಾ ಬೌಲಿಂಗ್ ಕೋಚ್ ಹುದ್ದೆಗೆ ವಾಸ್ ರಾಜೀನಾಮೆ

ಶ್ರೀಲಂಕಾ ಬೌಲಿಂಗ್ ಕೋಚ್ ಹುದ್ದೆಗೆ ವಾಸ್ ರಾಜೀನಾಮೆ

HSA   ¦    Feb 23, 2021 11:00:24 AM (IST)
ಶ್ರೀಲಂಕಾ ಬೌಲಿಂಗ್ ಕೋಚ್ ಹುದ್ದೆಗೆ ವಾಸ್ ರಾಜೀನಾಮೆ

ನವದೆಹಲಿ: ಶ್ರೀಲಂಕಾ ಕ್ರಿಕೆಟ್ ತಂಡದ ಬೌಲಿಂಗ್ ಕೋಚ್ ಆಗಿ ನೇಮಿಸಲ್ಪಟ್ಟಿದ್ದ ಮಾಜಿ ವೇಗಿ ಚಮಿಂಡಾ ವಾಸ್ ಮೂರೇ ದಿನಗಳಲ್ಲಿ ತನ್ನ ಹುದ್ದೆಯಿಂದ ಕೆಳಗಿಳಿದಿದ್ದಾರೆ.

ಬೋರ್ಡ್ ನೊಂದಿಗೆ ವೇತನ ಸಂಬಂಧಿ ವಿವಾದದಿಂದಾಗಿ ಅವರು ಹುದ್ದೆಯಿಂದ ಕೆಳಗಿಳಿರುವುದಾಗಿ ತಿಳಿದುಬಂದಿದೆ.

ವೆಸ್ಟ್ ಇಂಡೀಸ್ ಗೆ ತಂಡವು ಪ್ರಯಾಣಿಸುವುದಕ್ಕೆ ಕೆಲವು ಸಮಯಕ್ಕೆ ಮೊದಲೇ ಅವರು ತನ್ನ ಹುದ್ದೆಗೆ ರಾಜೀನಾಮೆ ನೀಡಿರುವರು.

ಈಗ ಎಲ್ಲೆಡೆ ಆರ್ಥಿಕ ಮುಗ್ಗಟ್ಟು ಉಂಟಾಗಿದೆ. ವಾಸ್ ಅವರು ಈ ಹಂತದಲ್ಲಿ ತಂಡದಿಂದ ಹೊರಗುಳಿದಿರುವುದು ಸರಿಯಾದ ನಿರ್ಧಾರವಲ್ಲ ಎಂದು ಕ್ರಿಕೆಟ್ ಶ್ರೀಲಂಕಾ ಹೇಳಿದೆ.