ಬಾರ್ಡರ್-ಗವಾಸ್ಕರ್ ಸರಣಿಯಿಂದ ಕನ್ನಡಿಗ ಕೆ.ಎಲ್ ರಾಹುಲ್ ಔಟ್

ಬಾರ್ಡರ್-ಗವಾಸ್ಕರ್ ಸರಣಿಯಿಂದ ಕನ್ನಡಿಗ ಕೆ.ಎಲ್ ರಾಹುಲ್ ಔಟ್

Pavan Kumar   ¦    Jan 05, 2021 02:23:59 PM (IST)
ಬಾರ್ಡರ್-ಗವಾಸ್ಕರ್ ಸರಣಿಯಿಂದ ಕನ್ನಡಿಗ ಕೆ.ಎಲ್ ರಾಹುಲ್ ಔಟ್

ಸಿಡ್ನಿ: ಬಾರ್ಡರ್-ಗವಾಸ್ಕರ್ ಸರಣಿಯಿಂದ ಭಾರತದ ಬ್ಯಾಟ್ಸ್‌ಮನ್ ಕೆ.ಎಲ್.ರಾಹುಲ್ ಅವರನ್ನು ಹೊರಹಾಕಲಾಗಿದೆ ಎಂದು ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಇಂದು ಬೆಳಗ್ಗೆ ಸ್ಪಷ್ಟಪಡಿಸಿದೆ.

ಆಸ್ಟ್ರೇಲಿಯಾ ವಿರುದ್ಧದ ಟೆಸ್ಟ್ ಸರಣಿಯ ತಂಡದ ಭಾಗವಾಗಿದ್ದರೂ ಶನಿವಾರ ಮೆಲ್ಬೋರ್ನ್ ಕ್ರಿಕೆಟ್ ಮೈದಾನದಲ್ಲಿ (ಎಂಸಿಜಿ) ನಡೆದ ನೆಟ್ ಸೆಷನ್‌ನಲ್ಲಿ ಕೈ ಮಣಿಕಟ್ಟಿನಲ್ಲಿ ಉಳುಕು ಉಂಟಾಗಿದೆ. ಹಾಗಾಗಿ ಇದರಿಂದ ಚೇತರಿಸಿಕೊಳ್ಳಲು ಸುಮಾರು ಮೂರು ವಾರಗಳ ಸಮಯ ಬೇಕಾಗುತ್ತದೆ.

ಶನಿವಾರ ನಡೆದ ಟೀಮ್ ಇಂಡಿಯಾದ ಅಭ್ಯಾಸದ ವೇಳೆ ಎಂಸಿಜಿಯಲ್ಲಿ ನೆಟ್‌ನಲ್ಲಿ ಬ್ಯಾಟಿಂಗ್ ಮಾಡುವಾಗ ಕೆಎಲ್ ರಾಹುಲ್ ಎಡಗೈ ಮಣಿಕಟ್ಟನ್ನು ಉಳುಕಿಸಿದ್ದಾರೆ.

ಇದರಿಂದ ಗುಣಮುಖವಾಗಲು ರಾಹುಲ್ ಗೆ ಸುಮಾರು ಮೂರು ವಾರಗಳ ಸಮಯ ಬೇಕಾಗುತ್ತದೆ ಹಾಗಾಗಿ ಬಾರ್ಡರ್-ಗವಾಸ್ಕರ್ ಟ್ರೋಫಿಯ ಉಳಿದ ಎರಡು ಟೆಸ್ಟ್ ಪಂದ್ಯಗಳಿಗೆ ವಿಕೆಟ್ ಕೀಪರ್ ಕಂ ಬ್ಯಾಟ್ಸ್ ಮಾನ್ ರಾಹುಲ್ ಕಣಕ್ಕಿಳಿಯುವುದಿಲ್ಲ. ಸಂಪೂರ್ಣವಾಗಿ ಚೇತರಿಸಿಕೊಳ್ಳಲು ಮತ್ತು ಪೂರ್ಣ ಶಕ್ತಿಯನ್ನು ಮರಳಿ ಪಡೆಯಲು "ಎಂದು ಬಿಸಿಸಿಐ ಪ್ರಕಟಣೆಯಲ್ಲಿ ತಿಳಿಸಿದೆ.