ಸಚಿನ್ ಗೆ ವಿಂಡೀಸ್ ಮಾಜಿ ಆಟಗಾರ ಲಾರಾ ನೀಡಿದ ಉಡುಗೊರೆಯೇನು ಗೊತ್ತೇ?

ಸಚಿನ್ ಗೆ ವಿಂಡೀಸ್ ಮಾಜಿ ಆಟಗಾರ ಲಾರಾ ನೀಡಿದ ಉಡುಗೊರೆಯೇನು ಗೊತ್ತೇ?

HSA   ¦    Nov 17, 2020 12:43:47 PM (IST)
ಸಚಿನ್ ಗೆ ವಿಂಡೀಸ್ ಮಾಜಿ ಆಟಗಾರ ಲಾರಾ ನೀಡಿದ ಉಡುಗೊರೆಯೇನು ಗೊತ್ತೇ?

ಮುಂಬಯಿ: ಸಚಿನ್ ತೆಂಡೂಲ್ಕರ್ ಅವರು ಅಂತಾರಾಷ್ಟ್ರೀಯ ಕ್ರಿಕೆಟಿನಿಂದ ನಿವೃತ್ತರಾದ ಸಂದರ್ಭದಲ್ಲಿ ವೆಸ್ಟ್ ಇಂಡೀಸ್ ನ ಮಾಜಿ ಆಟಗಾರ ಬ್ರಿಯಾನ್ ಲಾರಾ ಅವರಿಗೆ ವಿಶೇಷ ಉಡುಗೊರೆ ನೀಡಿದ್ದರಂತೆ.

2013 ನವಂಬರ್ 16ರಂದು ಸಚಿನ್ ಮುಂಬಯಿಯ ವಾಂಖೇಡೆ ಸ್ಟೇಡಿಯಂನಲ್ಲಿ ಕ್ರಿಕೆಟಿಗೆ ವಿದಾಯ ಹೇಳಿದ್ದರು.

ಲಾರಾ ಮತ್ತು ವೆಸ್ಟ್ ಇಂಡೀಸ್ ಕ್ರಿಕೆಟ್ ಬೋರ್ಡ್ ನೀಡಿರುವಂತಹ ಉಡುಗೊರೆಯು ಅದ್ಭುತವಾಗಿತ್ತು ಎಂದು ಅವರು ಟ್ವೀಟ್ ಮಾಡಿರುವರು.

ನನ್ನ ಗೆಳೆಯ ಬ್ರಿಯಾನ್ ಲಾರಾ ಅವರು ಈ ದಿನ ನನಗೆ ಸ್ಟೀಲ್ ಡ್ರಮ್ ನ್ನು ಉಡುಗೊರೆಯಾಗಿ ನೀಡಿದರು. ಇಂತಹ ಅದ್ಭುತ ಉಡುಗೊರೆ ಬಗ್ಗೆ ನಾನು ಯಾವಾಗಲೂ ತುಂಬಾ ಋಣಿ. ಅವರ ಪ್ರೀತಿ ಮತ್ತು ಗೌರವಕ್ಕೆ ಧನ್ಯವಾದ. ಮತ್ತೊಮ್ಮೆ ನನ್ನ ಧನ್ಯವಾದಗಳು ಎಂದು ಸಚಿನ್ ಟ್ವೀಟ್ ನಲ್ಲಿ ಬರೆದಿರುವರು.