ಟೆಸ್ಟ್ ಕ್ರಿಕೆಟಿಗೆ ದಕ್ಷಿಣ ಆಫ್ರಿಕಾ ಮಾಜಿ ನಾಯಕ ಡು ಪ್ಲೆಸಿಸ್ ವಿದಾಯ

ಟೆಸ್ಟ್ ಕ್ರಿಕೆಟಿಗೆ ದಕ್ಷಿಣ ಆಫ್ರಿಕಾ ಮಾಜಿ ನಾಯಕ ಡು ಪ್ಲೆಸಿಸ್ ವಿದಾಯ

HSA   ¦    Feb 17, 2021 12:13:10 PM (IST)
ಟೆಸ್ಟ್ ಕ್ರಿಕೆಟಿಗೆ ದಕ್ಷಿಣ ಆಫ್ರಿಕಾ ಮಾಜಿ ನಾಯಕ ಡು ಪ್ಲೆಸಿಸ್ ವಿದಾಯ

ಜೋಹನ್ಸ್ ಬರ್ಗ್: ದಕ್ಷಿಣ ಆಫ್ರಿಕಾ ಕ್ರಿಕೆಟ್ ತಂಡ ಮಾಜಿ ನಾಯಕ ಡು ಪ್ಲೆಸಿಸ್ ಅವರು ಟೆಸ್ಟ್ ಕ್ರಿಕೆಟಿಗೆ ವಿದಾಯ ಹೇಳಿರುವರು.

ಫೆ.17(ಬುಧವಾರ) ಅವರು ಈ ನಿರ್ಧಾರವನ್ನು ಪ್ರಕಟಿಸಿರುವರು. ದಕ್ಷಿಣ ಆಫ್ರಿಕಾ ಮತ್ತು ಆಸ್ಟ್ರೇಲಿಯಾ ನಡುವಿನ ಸರಣಿಯು ರದ್ದುಗೊಂಡ ಬಳಿಕ ಅವರು ತನ್ನ ನಿರ್ಧಾರ ಪ್ರಕಟಿಸಿರುವರು.

ಸ್ವದೇಶದಲ್ಲಿ ಆಸ್ಟ್ರೇಲಿಯಾ ವಿರುದ್ಧ ಆಡುವುದಾಗಿ ಅವರು ಹೇಳಿದ್ದರು. ಆದರೆ ಸರಣಿ ರದ್ದುಗೊಂಡ ಕಾರಣದಿಂದಾಗಿ ಅವರು ನಿವೃತ್ತಿ ಘೋಷಣೆ ಮಾಡಿರುವರು.

ಆಸ್ಟ್ರೇಲಿಯಾ ವಿರುದ್ಧ ಸರಣಿಯೊಂದಿಗೆ ಮುಕ್ತಾಯ ಮಾಡಲು ಬಯಸಿದ್ದೆ. ನಾನು ಮನಸ್ಸು ಹಾಗೂ ಹೃದಯದಿಂದ ಎಲ್ಲವನ್ನು ನಿರ್ಧಾರ ಮಾಡಿದ್ದೆ. ಎಲ್ಲವೂ ಸ್ಪಷ್ಟವಾಗಿತ್ತು ಎಂದು ಅವರು ಹೇಳಿದರು.

2012ರಲ್ಲಿ ಟೆಸ್ಟ್ ಕ್ರಿಕೆಟಿಗೆ ಪಾದಾರ್ಪಣೆ ಮಾಡಿದ್ದ ಡು ಪ್ಲೆಸಿಸ್ ಅವರು ಇದುವರೆಗೆ 10 ಶತಕ ಮತ್ತು 21 ಅರ್ಧ ಶತಕದ ನೆರವಿನಿಂದ 40.02 ಸರಾಸರಿಯಲ್ಲಿ 4,162 ರನ್ ಮಾಡಿದ್ದರು.