ಒಲಿಂಪಿಕ್ಸ್ ಅರ್ಹತಾ ಜಲಕ್ರೀಡೆ ಕ್ರೀಡಾಕೂಟಕ್ಕೆ ಕಾಶ್ಮೀರದ ಬಿಲ್ಕಿಸ್ ಬಾನು ತೀರ್ಪುಗಾರ್ತಿ

ಒಲಿಂಪಿಕ್ಸ್ ಅರ್ಹತಾ ಜಲಕ್ರೀಡೆ ಕ್ರೀಡಾಕೂಟಕ್ಕೆ ಕಾಶ್ಮೀರದ ಬಿಲ್ಕಿಸ್ ಬಾನು ತೀರ್ಪುಗಾರ್ತಿ

HSA   ¦    Feb 20, 2020 03:31:15 PM (IST)
ಒಲಿಂಪಿಕ್ಸ್ ಅರ್ಹತಾ ಜಲಕ್ರೀಡೆ ಕ್ರೀಡಾಕೂಟಕ್ಕೆ ಕಾಶ್ಮೀರದ ಬಿಲ್ಕಿಸ್ ಬಾನು ತೀರ್ಪುಗಾರ್ತಿ

ನವದೆಹಲಿ: ಕಯಾಕಿಂಗ್ ಮತ್ತು ಕ್ಯಾನೋಯಿಂಗ್ ಕೋಚ್ ಆಗಿರುವ ಕಾಶ್ಮೀರದ ಬಿಲ್ಕಿಸ್ ಬಾನು ಅವರು 2020ರ ಟೊಕಿಯಾ ಒಲಿಂಪಿಕ್ಸ್ ಗಾಗಿ ನಡೆಯಲಿರುವ ಏಶ್ಯನ್ ಅರ್ಹತಾ ಸುತ್ತಿನಲ್ಲಿ ಕಯಾಕಿಂಗ್ ಮತ್ತು ಕ್ಯಾನೋಯಿಂಗ್ ತೀರ್ಪುಗಾರರಾಗಿ ಕಾರ್ಯನಿರ್ವಹಿಸಲಿದ್ದಾರೆ.

ಅರ್ಹತಾ ಸುತ್ತು ಥಾಯ್ಲೆಂಡ್ ನ ಪಟ್ಟಾಯದಲ್ಲಿ ನಡೆಯಲಿದೆ.

ಪಟ್ಟಾಯದಲ್ಲಿ ನಡೆಯಲಿರುವ ಅತೀ ಪ್ರಮುಖ ಟೂರ್ನಮೆಂಟ್ ಗೆ ಜಪಾನ್ ನಲ್ಲಿರುವ ಏಶ್ಯನ್ ಕಾನ್ಫಡೆರೇಷನ್ ಅವರು ಆಯ್ಕೆ ಮಾಡಿರುವರು. ಇಂತಹ ಟೂರ್ನಮೆಂಟ್ ಗೆ ತೀರ್ಪುಗಾರರಾಗಿರುವ ಮೊದಲ ಭಾರತೀಯ ಮಹಿಳೆ ನಾನು ಎಂದರು.

ಇದು ಕೇವಲ ನನಗೆ ಮಾತ್ರವಲ್ಲದೆ, ನನ್ನ ರಾಜ್ಯ ಹಾಗೂ ದೇಶಕ್ಕೆ ತುಂಬಾ ಸಂಭ್ರಮದ ಕ್ಷಣ. ಒಲಿಂಪಿಕ್ಸ್ ಪ್ರತಿಯೊಬ್ಬರಿಗೂ ಒಂದು ಕನಸು. ನಾನು ಇದರಿಂದ ಒಂದು ಹೆಜ್ಜೆ ಹಿಂದಿದ್ದೇನೆ ಎಂದರು.