ಕೊರೋನಾ ವರಿಯಸ್ ಗೆ ಗೌರವ ಸಲ್ಲಿಸುವ ನೆಟ್ಟಿನಲ್ಲಿ ನೀಲಿ ಜೆರ್ಸಿ ಧರಿಸಲಿರುವ ಆರ್ ಸಿಬಿ

ಕೊರೋನಾ ವರಿಯಸ್ ಗೆ ಗೌರವ ಸಲ್ಲಿಸುವ ನೆಟ್ಟಿನಲ್ಲಿ ನೀಲಿ ಜೆರ್ಸಿ ಧರಿಸಲಿರುವ ಆರ್ ಸಿಬಿ

Ms   ¦    May 02, 2021 07:43:22 PM (IST)
ಕೊರೋನಾ ವರಿಯಸ್ ಗೆ  ಗೌರವ ಸಲ್ಲಿಸುವ ನೆಟ್ಟಿನಲ್ಲಿ ನೀಲಿ ಜೆರ್ಸಿ ಧರಿಸಲಿರುವ ಆರ್ ಸಿಬಿ

ಅಹಮದಾಬಾದ್: ಕಳೆದೊಂದು ವರ್ಷದಿಂದ ಪಿಪಿಇ ಕಿಟ್ ಧರಿಸಿ ಕೆಲಸ ಮಾಡುತ್ತಿರುವ ಕೋವಿಡ್ ವಾರಿಯರ್ಸ್ ಗೆ ಗೌರವ ಸೂಚಿಸುವ ಕಾರಣಗಳಿಂದ ಆರ್ ಸಿಬಿ ನೀಲಿ ಜೆರ್ಸಿ ಧರಿಸಲಿದೆ ಎಂದು ಸ್ವತಃ ನಾಯಕ ವಿರಾಟ್ ಕೊಹ್ಲಿ ಹೇಳಿಕೆ ನೀಡಿದ್ದಾರೆ.

 

ಅಷ್ಟೇ ಅಲ್ಲದೆ, ತಮ್ಮ ಕೈಲಾದಷ್ಟು ಸಹಾಯ ಮಾಡಲು ಮುಂದಾಗಿರುವ ಆರ್ ಸಿ ಬಿ ತಂಡ ಬೆಂಗಳೂರು ಸೇರಿದಂತೆ ಹಲವು ಪ್ರದೇಶಗಳಲ್ಲಿ ಉಂಟಾಗುತ್ತಿರುವ ಆಮ್ಲಜನಕದ ಕೊರತೆ ಹಾಗೂ ವೈದ್ಯಕೀಯ ಕ್ಷೇತ್ರದಲ್ಲಿ ಉಂಟಾಗಿರುವ ಹಣಕಾಸಿನ ತೊಂದರೆಗೆ ಸ್ಪಂದಿಸುವುದಾಗಿ ಕೊಹ್ಲಿ ತಿಳಿಸಿದ್ದಾರೆ. 

 

ಕಳೆದ ಕೆಲವು ವರ್ಷಗಳಿಂದ ಪರಿಸರ ಸಂರಕ್ಷಣೆಯ ಸಂದೇಶದೊಂದಿಗೆ ಆರ್ ಸಿಬಿ ಕೂಟದ ಎರಡು ಪಂದ್ಯಗಳನ್ನು ಹಸಿರು ಬಣ್ಣದ ಜೆರ್ಸಿ ಧರಿಸಿ ಆಡುತ್ತಿತ್ತು.ಕೂಟದಲ್ಲಿ ಈಗಾಗಲೇ ಆಡಿರುವ ಏಳು ಪಂದ್ಯಗಳಲ್ಲಿ ಆರ್ ಸಿಬಿ ಐದು ಪಂದ್ಯಗಳನ್ನು ಜಯಿಸಿದೆ. ಚೆನ್ನೈ ಮತ್ತು ಪಂಜಾಬ್ ವಿರುದ್ಧ ವಿರಾಟ್ ಬಳಗ ಮುಗ್ಗರಿಸಿತ್ತು. ಹತ್ತು ಅಂಕಗಳೊಂದಿಗೆ ಅಂಕಪಟ್ಟಿಯಲ್ಲಿ ಮೂರನೇ ಸ್ಥಾನದಲ್ಲಿರುವ ಆರ್ ಸಿಬಿ ತನ್ನ ಮುಂದಿನ ಪಂದ್ಯವನ್ನು ಕೋಲ್ಕತ್ತಾ ನೈಟ್ ರೈಡರ್ಸ್ ವಿರುದ್ಧ ಆಡಲಿದೆ.