ನವದೆಹಲಿ: ಇಂಡಿಯನ್ ಪ್ರಿಮಿಯರ್ ಲೀಗ್(ಐಪಿಎಲ್) 2021ಗೆ ಮೊದಲು ಆಟಗಾರರ ಹರಾಜು ಪ್ರಕ್ರಿಯೆಯು ದೊಡ್ಡ ಮಟ್ಟದಲ್ಲಿ ನಡೆದರೆ ಆಗ ಚೆನ್ನೈ ಸೂಪರ್ ಕಿಂಗ್ಸ್ ಮಹೇಂದ್ರ ಸಿಂಗ್ ಧೋನಿ ಅವರನ್ನು ಬಿಡುಗಡೆ ಮಾಡಬೇಕು ಎಂದು ಮಾಜಿ ಕ್ರಿಕೆಟಿಗ ಆಕಾಶ್ ಚೋಪ್ರಾ ಹೇಳಿರುವರು.
ಧೋನಿ ಬಿಡುಗಡೆ ಮಾಡಿದರೆ ಅದರಿಂದ ಚೆನ್ನೈಗೆ 15 ಕೋಟಿ ಲಭ್ಯವಾಗಲಿದೆ ಮತ್ತು ಈ ಹಣವನ್ನು ಅವರು ಬೇರೆ ಆಟಗಾರರ ಖರೀದಿಗೆ ಬಳಸಬಹುದು. ಧೋನಿ ಅವರನ್ನು ಬಿಡುಗಡೆ ಮಾಡಿದ ಬಳಿಕ ರೈಟ್ ಟು ಮ್ಯಾಚ್ ಕಾರ್ಡ್ ನಂತೆ ಅವರನ್ನು ಮರಳಿ ತಂಡಕ್ಕೆ ಕರೆಸಿಕೊಳ್ಳಬಹುದು ಎಂದರು.
ಧೋನಿ ಅವರನ್ನು ತಂಡದಲ್ಲಿ ಇರಿಸಿಕೊಳ್ಳಬೇಡಿ ಎಂದು ನಾನು ಹೇಳುತ್ತಿಲ್ಲ. ಆದರೆ ಐಪಿಎಲ್ ಹರಾಜಿಗೆ ಅವರನ್ನು ಬಿಡುಗಡೆ ಮಾಡಿ ಮತ್ತು ಹಾಗೆ ನೀವು ಉಳಿಸಿಕೊಂಡರೆ ಅದರಿಂದ 15 ಕೋಟಿ ರೂಪಾಯಿ ಬಳಸಲು ಆಗಲ್ಲ ಎಂದು ಚೋಪ್ರಾ ಹೇಳಿರುವರು.