ಕಡವೆ ಬೇಟೆಯಾಡಿದ ಮೂವರ ಬಂಧನ: ಇಬ್ಬರು ಪರಾರಿ

ಕಡವೆ ಬೇಟೆಯಾಡಿದ ಮೂವರ ಬಂಧನ: ಇಬ್ಬರು ಪರಾರಿ

SB   ¦    May 01, 2020 03:28:30 PM (IST)
ಕಡವೆ ಬೇಟೆಯಾಡಿದ ಮೂವರ ಬಂಧನ: ಇಬ್ಬರು ಪರಾರಿ

ಕಾರವಾರ:ಕಾಡಿನಲ್ಲಿ ಕಡವೆ ಬೇಟೆಯಾಡಿದ ಮೂವರನ್ನು ಅರಣ್ಯಾಧಿಕಾರಿಗಳು ಬಂಧಿಸಿದ ಘಟನೆ ಉತ್ತರ ಕನ್ನಡ ಜಿಲ್ಲೆಯ ಕಾರವಾರದ ಗ್ರಾಮೀಣ ಪ್ರದೇಶವಾದ ಕಾರವಾರದ ದೇವಳಮಕ್ಕಿ ವ್ಯಾಪ್ತಿಯ ಬರ್ಗಲ್ ಬಳಿ ನಡೆದಿದೆ.

ಇಬ್ಬರೂ ಆರೋಪಿಗಳು ಪರಾರಿಯಾಗಿದ್ದಾರೆ. ದೇವಳಮಕ್ಕಿ ವ್ಯಾಪ್ತಿಯ ಬರ್ಗಲ್ ಕಾಡಿನಲ್ಲಿ ಶಿಖಾರಿಗೆ ಐವರು ತೆಳಿದ್ದರು. ಇವರು ಕಾಡಿನಲ್ಲಿ ಕಂಡ ಕಡವೆಯನ್ನು ಗುಂಡಿಕ್ಕಿ ಹತ್ಯೆ ಮಾಡಿದ್ದರು.

ಬರ್ಗಲ್‌ನ ಕಮಲಾಕರ ಗೌಡ, ರೋಮನ್ ಕಾರಡೋಜ್, ಆಗ್ನೇಲ್ ಪರೆಯಾ ಬಂಧಿತರು. ವಿಕ್ಟರ್ ಕಾರಡೋಜ್ ಹಾಗೂ ಉಲ್ಲಾಸ್ ಬಂಡಾರಿ ಎನ್ನುವವರು‌ ತಲೆ ಮರಿಸಿಕೊಂಡಿದ್ದಾರೆ. ಉಪ ಅರಣ್ಯ ಸಂರಕ್ಷಣಾಧಿಕಾರಿ ವಸಂತ ರೆಡ್ಡಿ ನೇತೃತ್ವದಲ್ಲಿ ಎಸಿಎಪ್ ಶರಣಕುಮಾರ, ವಲಯ ಅರಣ್ಯಾಧಿಕಾರಿ ಜಿ ವಿ ನಾಯ್ಕ ಹಾಗೂ ಉಪ ವಲಯ ಅರಣ್ಯಾಧಿಕಾರಿ ಕೃಷ್ಣನಂದ ಗಾಂವ್ಕರ್ ತಂಡ ಈ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.