ಮುಂಬೈ ವಿರುದ್ಧ ರಾಯಲ್ ಚಾಲೆಂಜರ್ಸ್ ಗೆ ಸೂಪರ್ ಗೆಲುವು

ಮುಂಬೈ ವಿರುದ್ಧ ರಾಯಲ್ ಚಾಲೆಂಜರ್ಸ್ ಗೆ ಸೂಪರ್ ಗೆಲುವು

Y.K.   ¦    Sep 29, 2020 09:46:04 AM (IST)
ಮುಂಬೈ ವಿರುದ್ಧ ರಾಯಲ್ ಚಾಲೆಂಜರ್ಸ್ ಗೆ ಸೂಪರ್ ಗೆಲುವು

ದುಬೈ: ದುಬೈನಲ್ಲಿ ನಡೆದ ಐಪಿಎಲ್ 13ನೇ ಆವೃತ್ತಿಯ 10ನೇ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಮುಂಬೈ ಇಂಡಿಯನ್ಸ್ ತಂಡವನ್ನು ಸೂಪರ್ ಓವರ್‌ನಲ್ಲಿ ಮಣಿಸಿದೆ.

ಆರ್‌ಸಿಬಿ ನೀಡಿದ್ದ 202 ರನ್​ಗಳ ಗುರಿ ಬೆನ್ನತ್ತಿದ ಮುಂಬೈ 201 ರನ್ ಗಳಿಸಿ ಪಂದ್ಯವನ್ನು ಟೈ ಮಾಡಿಕೊಂಡಿತ್ತು. ಆ ನಂತರ ಸೂಪರ್ ಓವರ್ ನಲ್ಲಿ ಬೆಂಗಳೂರಿಗೆ 8 ರನ್ ಗುರಿ ನೀಡಿತ್ತು.

ಆರ್‌ಸಿಬಿ ಪರ ನಾಯಕ ವಿರಾಟ್ ಕೊಹ್ಲಿ (5) ಹಾಗೂ ಎಬಿಡಿ ವಿಲಿಯರ್ಸ್ (6) ರನ್ ಗಳಿಸಿ ತಂಡಕ್ಕೆ ಜಯ ದೊರಕಿಸಿದ್ದಾರೆ.

ಈ ಮುನ್ನ ಮುಂಬೈನ ಇಶನ್ ಕಿಶನ್ (99) ಹಾಗೂ ಕಿರನ್ ಪೋಲಾರ್ಡ್ (60) ಭರ್ಜರಿ ಬ್ಯಾಟಿಂಗ್ ಪ್ರದರ್ಶನ ನೀಡಿ ತಂಡವು 5 ವಿಕೆಯ್ ಗೆ 201 ರನ್ ಕಲೆಹಾಕುವಂತೆ ಮಾಡಿದ್ದರು.

ಟಾಸ್ ಸೋತು ಬ್ಯಾಟಿಂಗ್ ನಡೆಸಿದ್ದ ಬೆಂಗಳೂರು ದೇವದತ್ ಪಡಿಕ್ಕಲ್, ಅರಮ್ ಪಿಂಚ್, ಎಬಿಡಿ ವಿಲಿಯರ್ಸ್ ಮತ್ತು ಶಿವಬ್ ದುಬೆ ಅವರ ನೆರವೆನಿಂದ 20 ಓವರ್ ನಲ್ಲಿ 3 ವಿಕೆಟ್ ನಷ್ಟಕ್ಕೆ 201 ರನ್ ಗಳಿಸಿತ್ತು.