"ವಿಶ್ವ ಟೆಸ್ಟ್ ಚಾಂಪಿಯನ್ ಶಿಪ್"

"ವಿಶ್ವ ಟೆಸ್ಟ್ ಚಾಂಪಿಯನ್ ಶಿಪ್"

Komara sachin   ¦    Mar 07, 2021 04:06:54 PM (IST)
"ವಿಶ್ವ ಟೆಸ್ಟ್ ಚಾಂಪಿಯನ್ ಶಿಪ್"
 ಅಂತರರಾಷ್ಟ್ರೀಯ ಕ್ರಿಕೆಟಿನ ಮೂರು ಸ್ವರೂಪಗಳಲ್ಲಿ ಪ್ರತಿಯೊಂದಕ್ಕೂ ಒಂದು ಪರಾಕಾಷ್ಠೆಯ ಪಂದ್ಯಾವಳಿಗಳನ್ನು ನಡೆಸುವ 'ಐಸಿಸಿ'ಯ  ಗುರಿಗೆ ಅನುಗುಣವಾಗಿ ಐಸಿಸಿಯು "ಟೆಸ್ಟ್ ಕ್ರಿಕೆಟ್" ಗಾಗಿ ಆಯೋಜಿಸಿದ ಲೀಗ್ "ವಿಶ್ವ ಟೆಸ್ಟ್ ಚಾಂಪಿಯನ್ ಶಿಪ್". 
 
2019ರ ಆಗಸ್ಟ್ 1 ರಂದು ಪ್ರಾರಂಭವಾದ ಟೂರ್ನಿಯ 2021 ರ ಜೂನ್ 18 ರಂದು ಅಂತಿಮ ಪಂದ್ಯ ನಿಗದಿಸಿದ್ದು, ಅಂಕಪಟ್ಟಿಯಲ್ಲಿ   ಅಗ್ರಸ್ಥಾನ ಗಳಿಸಿದ ಎರಡು ತಂಡದೊಂದಿಗೆ ಫೈನಲ್ ಪಂದ್ಯ ನಡೆಯಲಿದೆ.
 
ಒಟ್ಟು ಒಂಬತ್ತು ತಂಡಗಳನ್ನು ಒಳಗೊಂಡ ಲೀಗ್  ಇದಾಗಿದ್ದು , ಪ್ರತಿಯೊಂದು ತಂಡವು ಉಳಿದ ಎಂಟು ತಂಡಗಳ ಪೈಕಿ ಆರು ತಂಡಗಳ ವಿರುದ್ಧ ಟೆಸ್ಟ್ ಸರಣಿಯಲ್ಲಿ (ಮೂರು ಸ್ವದೇಶಿ ಹಾಗೂ ಮೂರು ವಿದೇಶಿ)  ಪಾಲ್ಗೊಳ್ಳಬೇಕು. ಪ್ರತಿಯೊಂದು ಸರಣಿಯು 2 ರಿಂದ 5 ಪಂದ್ಯಗಳನ್ನು ಒಳಗೊಂಡಿರುತ್ತವೆ.  ಪಂದ್ಯಗಳ ಸಂಖ್ಯೆಗಳಲ್ಲಿ ವ್ಯತ್ಯಾಸವಾದರೂ ಪ್ರತಿ ತಂಡವೂ ಪ್ರತಿ ಸರಣಿಯಲ್ಲಿ  ಗರಿಷ್ಠ 120 ಅಂಕ ಗಳಿಸಬಹುದು.ಕೆಲವು ಮಾನದಂಡಗಳ ಮೂಲಕ ಅಂಕಗಳನ್ನು ನೀಡಲಾಗುವ ಕಾರಣ  ಪಂದ್ಯಗಳ ಸಂಖ್ಯೆ ಗಳಲ್ಲಿ ವ್ಯತ್ಯಾಸವಿದ್ದರೂ ಅಂಕಪಟ್ಟಿಯ ಮೇಲೆ ಪರಿಣಾಮ ಬೀರುವುದಿಲ್ಲ. ಲೀಗ್ ನ ಕೊನೆಯಲ್ಲಿ ಹೆಚ್ಚು ಅಂಕಗಳನ್ನು ಪಡೆದ ಎರಡು ತಂಡಗಳು ಫೈನಲ್ ನಲ್ಲಿ ಸ್ಪರ್ಧಿಸುತ್ತವೆ ಫೈನಲ್ ಪಂದ್ಯವು ಡ್ರಾ ಅಥವಾ ಟೈ ನಲ್ಲಿ ಅಂತ್ಯಗೊಂಡರೆ ಎರಡು ತಂಡಗಳನ್ನು ಜಂಟಿ ಚಾಂಪಿಯನ್ ಎಂದು ಘೋಷಿಸಲಾಗುತ್ತದೆ.
 
ಕೋವಿಡ್19 ಸಾಂಕ್ರಾಮಿಕ ಪರಿಣಾಮದಿಂದ ಕೆಲವು ತಂಡಗಳ ಪಂದ್ಯಗಳನ್ನು ರದ್ದುಪಡಿಸಲಾಗಿತ್ತು. ನಿಯಮದಂತೆ ಆರು ಸರಣಿಗಳನ್ನು ಪ್ರತಿ ತಂಡವು ಪೂರ್ಣಗೊಳಿಸಬೇಕಿತ್ತು , ಕೆಲವು ತಂಡಗಳಿಗೆ ಪೂರ್ಣಗೊಳಿಸಲು ಸಾಧ್ಯವಾಗದ ಕಾರಣದಿಂದ ಅಂಕಪಟ್ಟಿಯನ್ನು  ಶೇಕಡವಾರು ಅಂಕಗಳಿಂದ ನಿರ್ಧರಿಸಲಾಗುವುದು ಎಂದು ಐಸಿಸಿ ಘೋಷಿಸಿದೆ.
 
ಲೀಗ್ ಅಂತಿಮ ಘಟ್ಟಕ್ಕೆ ತಲುಪಿದ್ದು ಅಂಕಪಟ್ಟಿಯಲ್ಲಿ ಅಗ್ರ ಸ್ಥಾನ ಗಳಿಸಿದ ಎರಡು ತಂಡಗಳಾದ ಭಾರತ( 72.2%)  ಮತ್ತು ನ್ಯೂಜಿಲ್ಯಾಂಡ್(70%) ನಡುವೆ ಇಂಗ್ಲೆಂಡನ 'ಲಾರ್ಡ್ಸ್' ಕ್ರೀಡಾಂಗಣದಲ್ಲಿ ಅಂತಿಮ ಪಂದ್ಯ ನಡೆಲಿದ್ದು ಟೆಸ್ಟ್ ಚಾಂಪಿಯನ್ ಯಾರಾಗ್ತಾರೆ ಎಂಬುದು ಕಾಯ್ದು ನೋಡಬೇಕಾಗಿದೆ.