ವಿಂಡೀಸ್ ವಿರುದ್ಧದ ಮೊದಲ ಟೆಸ್ಟ್ ಗೆ ಜೋ ರೂಟ್ ಅಲಭ್ಯ 

ವಿಂಡೀಸ್ ವಿರುದ್ಧದ ಮೊದಲ ಟೆಸ್ಟ್ ಗೆ ಜೋ ರೂಟ್ ಅಲಭ್ಯ 

HSA   ¦    Jul 01, 2020 12:34:09 PM (IST)
ವಿಂಡೀಸ್ ವಿರುದ್ಧದ ಮೊದಲ ಟೆಸ್ಟ್ ಗೆ ಜೋ ರೂಟ್ ಅಲಭ್ಯ 

ಲಂಡನ್: ಇಂಗ್ಲೆಂಡ್ ನಾಯಕ ಜೋ ರೂಟ್ ಅವರು ಕೊವಿಡ್-19 ಸಾಂಕ್ರಾಮಿಕ ಬಳಿಕ ನಡೆಯಲಿರುವ ಮೊದಲ ಟೆಸ್ಟ್ ನಲ್ಲಿ ಆಡುತ್ತಿಲ್ಲ.

ಪತ್ನಿಯ ಹೆರಿಗೆ ಕಾರಣದಿಂದಾಗಿ ಜೋ ರೂಟ್ ಅವರು ಮೊದಲ ಟೆಸ್ಟ್ ನಿಂದ ಹೊರಗುಳಿಯಲಿರುವರು ಎಂದು ಇಂಗ್ಲೆಂಡ್ ಕ್ರಿಕೆಟ್ ಮಂಡಳಿ ತಿಳಿಸಿದೆ.

ರೂಟ್ ಬದಲಿಗೆ ಬೆನ್ ಸ್ಟೋಕ್ಸ್ ತಂಡವನ್ನು ಮುನ್ನಡೆಸಲಿದ್ದಾರೆ. ವೆಸ್ಟ್ ಇಂಡೀಸ್ ವಿರುದ್ಧ ಟೆಸ್ಟ್ ಸರಣಿಯನ್ನು ಇಂಗ್ಲೆಂಡ್ ಆಡಲಿದೆ.

ಇಂದಿನಿಂದ ಆರಂಭವಾಗಲಿರುವ ಅಭ್ಯಾಸ ಪಂದ್ಯ ಮತ್ತು ಜುಲೈ 8ರಿಂದ ನಡೆಯಲಿರುವ ಮೊದಲ ಟೆಸ್ಟ್ ನಿಂದ ರೂಟ್ ಹೊರಗುಳಿಯುವರು.