ಇಸ್ರೋ ವಿಜ್ಞಾನಿಗಳ ಶ್ಲಾಘಿಸಿದ ಕ್ರಿಕೆಟಿಗರು

ಇಸ್ರೋ ವಿಜ್ಞಾನಿಗಳ ಶ್ಲಾಘಿಸಿದ ಕ್ರಿಕೆಟಿಗರು

HSA   ¦    Sep 07, 2019 01:31:26 PM (IST)
ಇಸ್ರೋ ವಿಜ್ಞಾನಿಗಳ ಶ್ಲಾಘಿಸಿದ ಕ್ರಿಕೆಟಿಗರು

ನವದೆಹಲಿ: ಚಂದ್ರಯಾನ-2 ಕೊನೇ ಕ್ಷಣದಲ್ಲಿ ವಿಫಲವಾದರೂ ಭಾರತೀಯ ವಿಜ್ಞಾನಿಗಳ ಸಾಧನೆಯನ್ನು ಮಾಜಿ ಕ್ರಿಕೆಟಿಗರಾದ ವೀರೇಂದ್ರ ಸೆಹ್ವಾಗ್ ಮತ್ತು ಟೀಂ ಇಂಡಿಯಾದ ಕೋಚ್ ರವಿಶಾಸ್ತ್ರಿ ಮೊದಲಾದವರು ಶ್ಲಾಘಿಸಿದ್ದಾರೆ.

ಇಸ್ರೋ ವಿಜ್ಞಾನಿಗಳು ನಮ್ಮನ್ನು ವಿಶ್ವ ಮಟ್ಟದಲ್ಲಿ ಗುರುತಿಸುವಂತೆ ಮಾಡಿದೆ. ಚಂದ್ರಯಾನ-2 ಭಾರತದ ಮಕ್ಕಳಿಗೆ ಪ್ರೇರಣೆ ಎಂದು ರವಿಶಾಸ್ತ್ರಿ ಟ್ವೀಟ್ ಮಾಡಿದ್ದಾರೆ.

ಭಾರತೀಯ ವಿಜ್ಞಾನಿಗಳು ತಮ್ಮ ಮಿಷನ್ ಗಳಲ್ಲಿ ಮುಂದೊಂದು ದಿನ ಖಂಡಿತವಾಗಿಯೂ ಯಶಸ್ವಿಯಾಗುತ್ತದೆ. ಅವರ ಮೇಲೆ ನಮಗೆಲ್ಲರಿಗೂ ನಂಬಿಕೆಯಿದೆ ಎಂದು ಸೆಹ್ವಾಗ್ ಕಾವ್ಯದ ದಾಟಿಯಲ್ಲಿ ಬರೆದಿದ್ದಾರೆ.

ಇದೇ ವೇಳೆ ಮಾಜಿ ಆಟಗಾರ, ಸಂಸದ ಗೌತಮ್ ಗಂಭೀರ್ ಕೂಡ ವಿಜ್ಞಾನಿಗಳನ್ನು ಶ್ಲಾಘಿಸಿದ್ದು, ಮುಂದೆ ವೈಫಲ್ಯ ಮೀರಿ ದೊಡ್ಡ ಮಟ್ಟದ ಯಶಸ್ಸು ಸಾಧಿಸಲಿದ್ದಾರೆ ಎಂದು ಹಾರೈಸಿದ್ದಾರೆ.