ಉ.ಪ್ರದೇಶದಲ್ಲಿ ಹಳಿ ತಪ್ಪಿದ ರೈಲು, 3 ಸಾವು, 9ಮಂದಿಗೆ ಗಾಯ

ಉ.ಪ್ರದೇಶದಲ್ಲಿ ಹಳಿ ತಪ್ಪಿದ ರೈಲು, 3 ಸಾವು, 9ಮಂದಿಗೆ ಗಾಯ

YK   ¦    Nov 24, 2017 11:45:01 AM (IST)
ಉ.ಪ್ರದೇಶದಲ್ಲಿ ಹಳಿ ತಪ್ಪಿದ ರೈಲು, 3 ಸಾವು, 9ಮಂದಿಗೆ ಗಾಯ

ಚಿತ್ರಕೂಟ (ಉತ್ತರ ಪ್ರದೇಶ): ಇಲ್ಲಿನ ಮಣಿಕ್ಪುರ್ ರೈಲ್ವೆ ನಿಲ್ದಾಣ ಬಳಿ ಗೋವಾದ ವಾಸ್ಕೋಡಗಾಮದಿಂದ ಬಿಹಾರದ ಪಟ್ನಾಗೆ ಹೋಗುತ್ತಿದ್ದ ವಾಸ್ಕೋಡಗಾಮ- ಪಟ್ನಾ ಎಕ್ಸ್ ಪ್ರೆಸ್ನ 13 ಬೋಗಿಗಳು ಹಳಿ ತಪ್ಪಿದ್ದು ಮೂವರು ಸಾವಿಗೀಡಾಗಿದ್ದರೆ, 9 ಮಂದಿಗೆ ಗಾಯಗಳಾಗಿವೆ.

ಇಂದು ಮುಂಜಾನೆ 4. 18ಕ್ಕೆ ಈ ಘಟನೆ ನಡೆದಿದೆ. ಗಾಯಾಳುಗಳನ್ನು ಹತ್ತಿರದ ಆಸ್ಪತ್ರೆಗೆ ದಾಖಲಿಸಲಾಗಿದೆ.