ಬಾಹುಬಲಿಯಾಗಲು ಹೋದ ಯುವಕನ ಗತಿ ಏನಾಯಿತು?

ಬಾಹುಬಲಿಯಾಗಲು ಹೋದ ಯುವಕನ ಗತಿ ಏನಾಯಿತು?

Nov 14, 2017 10:12:47 AM (IST)
ಬಾಹುಬಲಿಯಾಗಲು ಹೋದ ಯುವಕನ ಗತಿ ಏನಾಯಿತು?

ತಿರುವನಂತಪುರಂ: ಸಿನಿಮಾ ಮತ್ತು ನಿಜ ಜೀವನಕ್ಕೆ ಅಜಗಜಾಂತರ ವ್ಯತ್ಯಾಸವಿದೆ ಎನ್ನುವುದನ್ನು ತಿಳಿಯದ ಯುವಕನೊಬ್ಬ ಬಾಹುಬಲಿ-2 ಚಿತ್ರದಲ್ಲಿ ನಟ ಪ್ರಭಾಸ್ ಆನೆ ಮೇಲೆ ಏರುವಂತೆ ಏರಲು ಹೋಗಿ ಮೂಳೆ ಮುರಿದುಕೊಂಡಿರುವ ಘಟನೆಯು ಇಲ್ಲಿ ನಡೆದಿದೆ.

ಪ್ರಭಾಸ್ ಆನೆ ಮೇಲೇರುವ ದೃಶ್ಯವು ಹೆಚ್ಚಿನವರ ಪ್ರಶಂಸೆಗೆ ಪಾತ್ರವಾಗಿತ್ತು. ಆದರೆ ಯುವಕ ಕೂಡ ಹೀಗೆ ಆನೆ ಮೇಲೆರಿ ಪ್ರಭಾಸ್ ಆಗಲು ಹೋಗಿ ಈಗ ಬೆನ್ನು ಮೂಳೆ ಮುರಿದುಕೊಂಡಿದ್ದಾನೆ. ಆನೆ ಮೇಲೆ ಹತ್ತಲು ಹೋದಾಗ ಅದು ಸೊಂಡಿಲಿನಿಂದ ದೂರ ಬಿಸಾಡಿದೆ. ಇದರಿಂದ ಆತನ ಬೆನ್ನು ಮೂಳೆ ಮುರಿತಕ್ಕೆ ಒಳಗಾಗಿದೆ ಎಂದು ವರದಿಗಳು ಹೇಳಿವೆ.

ತನ್ನ ಕೆಲಸವಾಗಬೇಕಾದರೆ ಆನೆಗೆ ಆಮಿಷ ಒಡ್ಡಬೇಕೆಂದು ಅರಿತಿದ್ದ ಯುವಕ ಮೊದಲು ಆನೆಗೆ ಬಾಳೆಹಣ್ಣು ತಿನ್ನಿಸುತ್ತಾನೆ. ಇದರ ಬಳಿಕ ಅದರ ಸೊಂಡಿಲಿಗೆ ಮುತ್ತಿಕ್ಕಿ ಸೊಂಡಿಲಿನ ಮೇಲೆ ಕಾಲಿಟ್ಟು ಮೇಲೇರಲು ಪ್ರಯತ್ನಿಸಿದಾಗ ಆನೆ ಆತನನ್ನು ಎತ್ತಿ ಬಿಸಾಕಿದೆ. ಆದರೆ ಜೀವ ಉಳಿಸಿಕೊಂಡ ಯುವಕನ ಬೆನ್ನು ಮಾತ್ರ ಮುರಿದಿದೆ.

ಇನ್ನು ಜನ್ಮದಲ್ಲಿಯೂ ಆನೆ ಮುಂದೆ ಬಾಹುಬಲಿಯಾಗಲು ಹೋಗಲ್ಲವೆಂದು ಯುವಕ ಮನದಲ್ಲಿಯೇ ಯೋಚಿಸಿರಬಹುದು.