ಭಾರತದಲ್ಲಿ 150ಕ್ಕೆ ಏರಿದ ರೂಪಾಂತರ ಕೊರೋನ ಪಾಸಿಟಿವ್ ಸಂಖ್ಯೆ

ಭಾರತದಲ್ಲಿ 150ಕ್ಕೆ ಏರಿದ ರೂಪಾಂತರ ಕೊರೋನ ಪಾಸಿಟಿವ್ ಸಂಖ್ಯೆ

MS   ¦    Jan 23, 2021 07:30:41 PM (IST)
ಭಾರತದಲ್ಲಿ 150ಕ್ಕೆ ಏರಿದ ರೂಪಾಂತರ ಕೊರೋನ ಪಾಸಿಟಿವ್ ಸಂಖ್ಯೆ

ನವದೆಹಲಿ : ಕೆಲ ದಿನಗಳ ಹಿಂದೆ ಕಾಣಿಸಿಕೊಂಡ ಯುಕೆ ರೂಪಾಂತರ ಹೊಸ ಕೊರೊನಾ ಸೋಂಕಿನ ಪ್ರಕರಣಗಳು ಭಾರತದಲ್ಲಿ ಪತ್ತೆಯಾಗಿವೆ ಎಂಬ ಸುದ್ದಿ ಈಗಾಗಲೇ ಎಲ್ಲೆಡೆ ಹರಡಿತ್ತು. ಅದರ ಕುರಿತಾದ ಪರೀಕ್ಷೆಗಳು ಭಾರತದಲ್ಲಿ ನಡೆಯುತ್ತಿದ್ದು, ಪ್ರಸ್ತುತ ಪಾಸಿಟಿವ್ ಪ್ರಕರಣಗಳ ಸಂಖ್ಯೆ 150 ಕ್ಕೆ ಏರಿದೆ ಎಂದು ವರದಿಗಳು ತಿಳಿಸಿವೆ.

ಭಾರತದಲ್ಲಿ ರೂಪಾಂತರ ಸೋಂಕಿನ ಪರೀಕ್ಷೆ ನಡೆಸಿದವರ ಕೇಂದ್ರ ಆರೋಗ್ಯ ಸಚಿವಾಲಯ ಶನಿವಾರ ಈ ಬಗ್ಗೆ ತಿಳಿಸಿದ್ದು, ಹೊಸ ಕೊರೋನಾ ಸೋಂಕಿನ ಪೋಸಿಟಿವ್ ಪ್ರಕರಣಗಳ ಸಂಖ್ಯೆ 150 ಕ್ಕೆ ಏರಿದೆ ಎಂದು ಹೇಳಿದೆ.

ಈಗಾಗಲೇ ಡೆನ್ಮಾರ್ಕ್ , ನೆದರ್ಲ್ಯಾಂಡ್ಸ್ , ಆಸ್ಟ್ರೇಲಿಯಾ , ಇಟಲಿ , ಸ್ವೀಡನ್ , ಫ್ರಾನ್ಸ್ , ಸ್ಪೇನ್ , ಸ್ವಿಟ್ಸರ್ಲೆಂಡ್ , ಜರ್ಮನಿ , ಕೆನಡಾ , ಜಪಾನ್ , ಲೆಬನಾನ್ ಮತ್ತು ಸಿಂಗಾಪುರ ಸೇರಿದಂತೆ ಹಲವಾರು ದೇಶಗಳಲ್ಲಿ ಹೊಸ ಸೋಂಕು ಕಾಣಿಸಿಕೊಂಡಿದೆ . ಭಾರತದಲ್ಲಿ ಎಚ್ಚರಿಕೆ ವಹಿಸಲಾಗಿದೆ . ಸೋಂಕಿತರನ್ನು ಆಯಾ ರಾಜ್ಯಗಳಲ್ಲಿ ಪ್ರತ್ಯೇಕವಾಗಿರಿಸಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಸಚಿವಾಲಯ ಸ್ಪಷ್ಟೀಕರಣ ನೀಡಿದೆ.