ಮ್ಯಾಟ್ರಿಮೋನಿಯಲ್ ಸೈಟ್ ನಲ್ಲಿ ಮೋಸ, ಠಾಣೆ ಮೆಟ್ಟಿಲೇರಿದ ಮಹಿಳೆ

ಮ್ಯಾಟ್ರಿಮೋನಿಯಲ್ ಸೈಟ್ ನಲ್ಲಿ ಮೋಸ, ಠಾಣೆ ಮೆಟ್ಟಿಲೇರಿದ ಮಹಿಳೆ

Jayashree Aryapu   ¦    May 04, 2021 05:20:24 PM (IST)
ಮ್ಯಾಟ್ರಿಮೋನಿಯಲ್ ಸೈಟ್ ನಲ್ಲಿ ಮೋಸ, ಠಾಣೆ ಮೆಟ್ಟಿಲೇರಿದ ಮಹಿಳೆ

ಹೈದರಾಬಾದ್: ಒಂದು ಕಡೆ ಕೊರೋನಾ ದೇಶವನ್ನು ಕಾಡುತ್ತಿದ್ದರೆ ವಂಚಕರು ಬೇರೆ ಬೇರೆ ಮಾರ್ಗ ಹುಡುಕಿಕೊಳ್ಳುತ್ತಿದ್ದಾರೆ. ಸಾಫ್ಟ್‌ವೇರ್ ಎಂಜಿನಿಯರ್ ಆಗಿರುವ 34 ವರ್ಷದ ಮಹಿಳೆ ಮ್ಯಾಟ್ರಿಮೋನಿಯಲ್ ಸೈಟ್ ಮೂಲಕ ಪರಿಚಯ ಮಾಡಿಕೊಂಡ ವ್ಯಕ್ತಿ ತನಗೆ 10 ಲಕ್ಷ ರೂ. ವಂಚನೆಯಾಗಿದೆ ಎಂದು ಆರೋಪಿಸಿದ್ದಾರೆ.

ಹೈದರಾಬಾದ್‌ನ ಬೇಗಂಪೆಟ್ ಪ್ರದೇಶದ ನಿವಾಸಿ ದೂರು ನೀಡಿದ್ದು, ಗಂಡನಿಂದ ಬೇರೆಯಾಗಿದ್ದ ಮಹಿಳೆ ಬೇರೆ ಮದುವೆಯಾಗಲು ಬಯಸುತ್ತಿದ್ದರು. ಈಕೆಗೆ ಆರು ವರ್ಷ ಮಗ ಇದ್ದಾನೆ.

ಮ್ಯಾಟ್ರಿಮೋನಿಗೆ ಜಾಯಿನ್ ಆದ ಮಹಿಳೆ ಸಂಗಾತಿಗಾಗಿ ಹುಡುಕಾಟ ನಡೆಸಿದ್ದಳು. ನಾನು ಯುಎಸ್ ನ ಕಂಪನಿಯಲ್ಲಿ ಇಂಜಿನಿಯರ್ ಆಗಿ ಕೆಲಸ ಮಾಡುತ್ತಿದ್ದೇನೆ. ನನ್ನ ಹೆಸರು ಮೆಹುಲ್ ಕುಮಾರ್ ಗುಜರಾತ್‌ನಲ್ಲಿ ಮನೆ ಹೊಂದಿದ್ದೇನೆ ಎಂದು ವ್ಯಕ್ತಿಯೊಬ್ಬ ಪರಿಚಯ ಮಾಡಿಕೊಂಡಿದ್ದಾನೆ.

ಗುಜರಾತ್‌ನಲ್ಲಿರುವ ಆಸ್ತಿಯ ಕಾಗದ ಪತ್ರದಲ್ಲಿ ಕೆಲ ಸಮಸ್ಯೆಯಾಗಿದ್ದು ತುರ್ತಾಗಿ 1.5 ಲಕ್ಷ ರೂ. ಬೇಕಿದೆ ಎಂದು ಪಡೆದುಕೊಂಡಿದ್ದಾನೆ.

ಇದಾದ ಮೇಲೆ ಆತ ಕೆಲವು ಆಭರಣ, ದುಬಾರಿ ಗಿಫ್ಟ್ ಗಳ ಪೋಟೋವನ್ನು ಕಳಿಸಿದ್ದು, ಇದನ್ನು ನಿನಗೋಸ್ಕರ ತರುತ್ತಿದ್ದೇನೆ ಎಂದು ಹೇಳಿ ನಂಬಿಸಿದ್ದಾನೆ. ಆದರೆ ಏಪ್ರಿಲ್ ಮಧ್ಯ ಭಾಗದಲ್ಲಿ ಕರೆ ಮಾಡಿದ್ದು ಅಧಿಕಾರಿಗಳು ಎಲ್ಲ ಆಭರಣ ಸೀಜ್ ಮಾಡಿದ್ದು ಟ್ಯಾಕ್ಸ್ ಕಟ್ಟಲು ಪೀಡಿಸುತ್ತಿದ್ದಾರೆ ತುರ್ತಾಗಿ ಆರು ಲಕ್ಷ ರೂ. ಬೇಕಿದೆ ಎದು ಹಾಕಿಸಿಕೊಂಡಿದ್ದಾನೆ.

ಇದಾದ ಮೇಲೆಯೂ ವಿವಿಧ ಕಾರಣ ನೀಡಿ ಮಹಿಳೆಗೆ ವಂಚಿಸಿರುವ ಯುವಕ ಹಣ ಹಾಕಿಸಿಕೊಂಡಿದ್ದಾನೆ. ಕೊನೆ ಸಂಪರ್ಕಕ್ಕೆ ಸಿಗದೇ ಹೋದಾಗ ಅನುಮಾನಗೊಂಡ ಮಹಿಳೆ ಪೊಲೀಸ್ ಠಾಣೆ ಮೆಟ್ಟಿಲು ಏರಿದ್ದಾರೆ.