ಒಮರ್ ಅಬ್ದುಲ್ಲಾ ಬಂಧನ: ಜಮ್ಮುಕಾಶ್ಮೀರ ಆಡಳಿತದಿಂದ ಮಾಹಿತಿ ಕೇಳಿದ ಸುಪ್ರೀಂಕೋರ್ಟ್

ಒಮರ್ ಅಬ್ದುಲ್ಲಾ ಬಂಧನ: ಜಮ್ಮುಕಾಶ್ಮೀರ ಆಡಳಿತದಿಂದ ಮಾಹಿತಿ ಕೇಳಿದ ಸುಪ್ರೀಂಕೋರ್ಟ್

HSA   ¦    Feb 14, 2020 04:34:41 PM (IST)
ಒಮರ್ ಅಬ್ದುಲ್ಲಾ ಬಂಧನ: ಜಮ್ಮುಕಾಶ್ಮೀರ ಆಡಳಿತದಿಂದ ಮಾಹಿತಿ ಕೇಳಿದ ಸುಪ್ರೀಂಕೋರ್ಟ್

ನವದೆಹಲಿ: ಮಾಜಿ ಮುಖ್ಯಮಂತ್ರಿ ಒಮರ್ ಅಬ್ದುಲ್ಲಾ ಅವರನ್ನು ಬಂಧನಲ್ಲಿ ಇಟ್ಟಿರುವ ಬಗ್ಗೆ ಮಾಹಿತಿ ನೀಡುವಂತೆ ಸುಪ್ರೀಂಕೋರ್ಟ್ ಶುಕ್ರವಾರ ಜಮ್ಮುಕಾಶ್ಮೀರ ಆಡಳಿತಕ್ಕೆ ನೋಟಿಸ್ ಜಾರಿ ಮಾಡಿದೆ.

ಒಮರ್ ಅಬ್ದುಲ್ಲಾ ಸೋದರಿ ಸಾರಾ ಅಬ್ದುಲ್ಲಾ ಅವರು ತನ್ನ ಸೋದರನನ್ನು ಸಾರ್ವಜನಿಕ ಸುರಕ್ಷತೆ ಕಾಯ್ದೆ(ಪಿಎಸ್ಎ) ಅಡಿಯಲ್ಲಿ ಬಂಧನದಲ್ಲಿ ಇಟ್ಟಿರುವ ಬಗ್ಗೆ ಅರ್ಜಿ ಸಲ್ಲಿಸಿದ್ದರು.

ಈ ಹೇಬಿಯಸ್ ಕಾರ್ಪಸ್ ಅರ್ಜಿಯಿಂದ ಬೇಗನೆ ಬಿಡುಗಡೆ ಆಗುವ ಬಗ್ಗೆ ನಮಗೆ ವಿಶ್ವಾಸವಿದೆ. ನ್ಯಾಯಾಂಗ ವ್ಯವಸ್ಥೆಯಲ್ಲಿ ನಮಗೆ ಸಂಪೂರ್ಣ ವಿಶ್ವಾಸವಿದೆ ಎಂದು ಸಾರಾ ಅಬ್ದುಲ್ಲಾ ಹೇಳಿದರು.