ಇಸ್ತಾನ್ ಬುಲ್ ನಲ್ಲಿ ಆತ್ಮಹತ್ಯಾ ಬಾಂಬ್ ಸ್ಫೋಟ: ಕನಿಷ್ಠ 36 ಮಂದಿ ಸಾವು, 150ಕ್ಕೂ ಅಧಿಕ ಮಂದಿ ಗಾಯ

ಇಸ್ತಾನ್ ಬುಲ್ ನಲ್ಲಿ ಆತ್ಮಹತ್ಯಾ ಬಾಂಬ್ ಸ್ಫೋಟ: ಕನಿಷ್ಠ 36 ಮಂದಿ ಸಾವು, 150ಕ್ಕೂ ಅಧಿಕ ಮಂದಿ ಗಾಯ

Jun 29, 2016 03:42:50 PM (IST)

ಇಸ್ತಾನ್ ಬುಲ್: ಇಸ್ತಾನ್ ಬುಲ್ ನಲ್ಲಿ ಸಂಭವಿಸಿದ ತ್ರಿವಳಿ ಆತ್ಮಹತ್ಯಾ ಬಾಂಬ್ ಸ್ಫೋಟದಲ್ಲಿ ಕನಿಷ್ಠ 36 ಮಂದಿ ಸಾವನ್ನಪ್ಪಿ 150ಕ್ಕೂ ಹೆಚ್ಚು ಮಂದಿ ಗಾಯಗೊಂಡಿರುವ  ಘಟನೆ ಮಂಗಳವಾರ ತಡರಾತ್ರಿ ಸಂಭವಿಸಿದೆ.

ಟರ್ಕಿ ರಾಜಧಾನಿ ಇಸ್ತಾನ್ ಬುಲ್ ನಲ್ಲಿ ವಿಮಾನ ನಿಲ್ದಾಣಕ್ಕೆ ನುಗ್ಗಿದ ಮೂವರು ಆಗಂತುಕುರ ಏಕಾಏಕಿ ಎಕೆ 47 ಗನ್ ಮೂಲಕ ಗುಂಡಿನ ಸುರಿಮಳೆ ಗೈದರು. ಪರಿಣಾಮ ನಿಲ್ದಾಣದಲ್ಲಿದ್ದ ಹತ್ತಾರು ಮಂದಿ  ಗುಂಡೇಟಿನಿಂದ ಸಾವನ್ನಪ್ಪಿದರು. ಗುಂಡಿನ ಶಬ್ದ ಕೇಳುತ್ತಿದ್ದಂತೆಯೇ ಉಗ್ರ ಮೇಲೆ ದಾಳಿ ನಡೆಸಿದ ಭದ್ರತಾ ಸಿಬ್ಬಂದಿಗಳು ಓರ್ವ ಉಗ್ರನಿಗೆ ಗುಂಡು ಹೊಡೆಯುತ್ತಿದ್ದಂತೆಯೇ ಆತ ತನ್ನ ಬಳಿ  ಇದ್ದ ಆತ್ಮಹತ್ಯಾ ಬಾಂಬ್ ಅನ್ನು ಸ್ಫೋಟಿಸಿಕೊಂಡ ಪರಿಣಾಮ ಭದ್ರತಾ ಸಿಬ್ಬಂದಿ ಸೇರಿದಂತೆ ಹಲವರು ಬಾಂಬ್ ಸ್ಫೋಟದಲ್ಲಿ ಮೃತಪಟ್ಟಿದ್ದಾರೆ ಎಂದು ತಿಳಿದು ಬಂದಿದೆ.