ಬಾಲಿ: ಇಂಡೋನೇಷ್ಯಾದಲ್ಲಿ ಬಂಧಿಸ್ಪಟ್ಟಿರುವ ಮುಂಬೈ ಭೂಗತ ಪಾತಕಿ ಛೋಟಾ ರಾಜನ್ ಗೆ ಜೀವ ಭಯವಿದೆ ಎಂದು ಹೇಳಿಕೊಂಡಿದ್ದಾನೆ.
ಮುಂಬೈನ ಕೆಲ ಪೊಲೀಸರಿಗೂ ದಾವೂದ್ಗೂ ಉತ್ತಮ ಭಾಂದವ್ಯವಿದೆ ಎಂದು ಹೇಳಿದ್ದಾನೆ. ಅಲ್ಲದೇ ತಾನು ದಾವೂದ್ ಇಬ್ರಾಹಿಂ ಹಾಗೂ ಭಯೋತ್ಪಾದನೆ ವಿರುದ್ಧ ಹೋರಾಟ ಮಾಡುತ್ತಿರುವುದಾಗಿ ಆತ ಹೇಳಿದ್ದಾನೆ. ಮುಂಬೈ ಪೊಲೀಸರ ಮೇಲೆ ನನಗೆ ನಂಬಿಕೆ ಇಲ್ಲ. ನನ್ನನ್ನು ದೆಹಲಿಗೆ ಕರೆದುಕೊಂಡು ಹೋಗಿ. ನನಗೆ ದಾವೂದ್ ಸಹಚರ ಛೋಟಾ ಶಕೀಲ್ ನಿಂದ ಜೀವ ಭಯವಿದೆ ಎಂದು ಹೇಳಿದ್ದಾನೆ.
ತನನ್ನು ಭಾರತಕ್ಕೆ ಕರೆತರಲು ಭಾರತದ ಅಧಿಕಾರಗಳ ತಂಡ ಬಾಲಿಗೆ ತೆರಳಿದೆ. ಸಿಬಿಐ ಅಧಿಕಾರಿಗಳು ಅಲ್ಲೇ ಛೋಟಾ ರಾಜನನ್ನು ವಿಚಾರಣೆಗೆ ಒಳಪಡಿಸಿದ್ದು, ಇಂದು ಅಥವಾ ನಾಳೆ ಭಾರತಕ್ಕೆ ಕರೆತರುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ.