News Kannada
Thursday, July 07 2022

ದೇಶ-ವಿದೇಶ

ಐಸಿಸ್ ಭಯೋತ್ಪಾದಕರ ಅಟ್ಟಹಾಸಕ್ಕೆ ಜಿ-20 ಶೃಂಗಸಭೆಯಲ್ಲಿ ಖಂಡನೆ - 1 min read

Photo Credit :

ಐಸಿಸ್ ಭಯೋತ್ಪಾದಕರ ಅಟ್ಟಹಾಸಕ್ಕೆ ಜಿ-20 ಶೃಂಗಸಭೆಯಲ್ಲಿ ಖಂಡನೆ

ಅಂಟಾಲ್ಯಾ: ಪ್ಯಾರಿಸ್ ನಲ್ಲಿ ಗುರುವಾರ ರಾತ್ರಿ ಐಸಿಸ್ ಭಯೋತ್ಪಾದಕರು ನಡೆಸಿದ ಅಟ್ಟಹಾಸವನ್ನು ಟರ್ಕಿಯಲ್ಲಿ ನಡೆಯುತ್ತಿರುವ ಜಿ-20 ಶೃಂಗಸಭೆಯಲ್ಲಿ ಹಾಗೂ ಬ್ರಿಕ್ಸ್‌ ದೇಶಗಳು ಒಕ್ಕೊರಲ ದನಿಯಿಂದ ಖಂಡಿಸಿವೆ.

ಸಭೆಯಲ್ಲಿ ಭಾಗವಹಿಸಿ ಮಾತನಾಡಿದ ಅಮೆರಿಕ ಅಧ್ಯಕ್ಷ ಬರಾಕ್ ಒಬಾಮ, ಐಸಿಸ್‌ ಉಗ್ರ ಸಂಘಟನೆಯನ್ನು ನಿರ್ನಾಮ ಮಾಡಿ, ಜಿಹಾದಿ ಜಾಲದ ಬೆಳವಣಿಗೆಗೆ ಉತ್ತೇಜನಕಾರಿಯಾಗಿರುವ ಸಿರಿಯಾ ನಾಗರಿಕ ಯುದ್ಧಕ್ಕೆ ಮಂಗಳ ಹಾಡಲು ನಡೆಸುತ್ತಿರುವ ಪ್ರಯತ್ನಗಳನ್ನು ಇಮ್ಮಡಿಗೊಳಿಸುವುದಾಗಿ ಘೋಷಿಸಿದ್ದಾರೆ.

ಆರ್ಥಿಕ ಬೆಳವಣಿಗೆ ಮತ್ತು ಹವಾಮಾನ ಬದಲಾವಣೆ ವಿಷಯದ ಬಗ್ಗೆ ಚರ್ಚಿಸಲು ಜಿ-20 ಶೃಂಗಸಭೆಯಲ್ಲಿ ವಿಶ್ವದ ಟಾಪ್-20 ಆರ್ಥಿಕ ರಾಷ್ಟ್ರಗಳ ಮುಖ್ಯಸ್ಥರು ಸಭೆ ಸೇರಿದ್ದರು. ಸಭೆಯಲ್ಲಿ ಪ್ಯಾರಿಸ್ ನಲ್ಲಿ ನಡೆದ ಭಯೋತ್ಪಾದಕ ಕೃತ್ಯ ಪ್ರಾಧಾನ್ಯತೆ ಪಡೆದು ಭಾಗವಹಿಸಿದ್ದ ಎಲ್ಲಾ ರಾಷ್ಟ್ರಗಳ ನಾಯಕರು ಭಯೋತ್ಪಾದಕ ದಾಳಿಯನ್ನು ಖಂಡಿಸಿದ್ದಾರೆ.  ಜಿ-20 ಶೃಂಗಸಭೆ ಜೊತೆಗೆ ಬ್ರಿಕ್ಸ್ ರಾಷ್ಟ್ರಗಳ ಮುಖ್ಯಸ್ಥರೊಂದಿಗೂ ಸಭೆ ನಡೆಸಿದ ಪ್ರಧಾನಿ ನರೇಂದ್ರ ಮೋದಿ, ಇಡಿ ವಿಶ್ವದ ಮಾನವ ಕುಲ ಭಯೋತ್ಪಾದನೆ ವಿರುದ್ಧ ಹೋರಾಡಬೇಕಿದೆ. ಭಯೋತ್ಪಾದನೆ ಮಟ್ಟ ಹಾಕಲು ಬ್ರಿಕ್ಸ್ ರಾಷ್ಟ್ರಗಳು ಹೆಚ್ಚಿನ ಒತ್ತು ನೀಡಬೇಕಿದೆ ಎಂದು ಹೇಳಿದ್ದಾರೆ.

ಆರ್ಥಿಕಾಭಿವೃದ್ಧಿ ಹಾಗೂ ಹವಾಮಾನ ಬದಲಾವಣೆ ಕುರಿತು ಚರ್ಚಿಸುವ ಉದ್ದೇಶದಿಂದ ಟರ್ಕಿ ಕರಾವಳಿಯಲ್ಲಿರುವ ಪ್ರವಾಸಿ ತಾಣ ಅಂತಾಲಿಯಾದಲ್ಲಿ ಭಾನುವಾರದಿಂದ ಎರಡು ದಿನಗಳ ಜಿ-20 ದೇಶಗಳ ಸಭೆ ಆರಂಭವಾಯಿತಾದರೂ ಪ್ಯಾರಿಸ್‌ನಲ್ಲಿ 129 ಮಂದಿಯನ್ನು ಉಗ್ರರು ಬಲಿ ಪಡೆದ ಘಟನೆಯ ಛಾಯೆ ಈ ಶೃಂಗ ಸಭೆಯನ್ನು ಆವರಿಸಿತು.

See also  ಭೂಪೇನ್ ಹಜಾರಿಕ ಕುಟುಂಬದಿಂದ ಭಾರತ ರತ್ನ ನಿರಾಕರಣೆ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

Subscribe to our Brand New YouTube Channel

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು