ಹೊಸದಿಲ್ಲಿ: ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ರಾಜೀನಾಮೆಗೆ ಆಗ್ರಹಿಸಿ ಬಿಜೆಪಿ ಇಂದು ಭಾರೀ ಪ್ರತಿಭಟನೆ ನಡೆಸಿತು.
ಆಟೋರಿಕ್ಷಾ ಪರ್ಮಿಟ್ ವಿಷಯದಲ್ಲಿ ಆಪ್ ಸರ್ಕಾರ ಭಾರೀ ಭೃಷ್ಟಾಚಾರ ನಡೆಸಿದೆ ಎಂದು ಬಿಜೆಪಿ ಆರೋಪಿಸಿದೆ. ಈ ಸಂಬಂಧ ಅದು ಇವತ್ತು ದೆಹಲಿಯ ಸಾರಿಗೆ ಸಚಿವ ಗೋಪಾಲ್ ರಾಯ್ ನಿವಾಸಕ್ಕೆ ಮುತ್ತಿಗೆ ಹಾಕಿತು.