ಪಾಲಕ್ಕಾಡ್ : ಪಂಜಾಬ್ನ ಪಠಾಣ್ಕೋಟ್ನಲ್ಲಿ ಹುತಾತ್ಮರಾದ ವೀರಪುತ್ರ ಲೆಫ್ಟಿನೆಂಟ್ ಕರ್ನಲ್ ನಿರಂಜನ್ ಅವರ ಅಂತ್ಯಕ್ರಿಯೆಯನ್ನು ಸಕಲ ಸರ್ಕಾರಿ ಗೌರವಗಳೊಂದಿಗೆ ಪಾಲಕ್ಕಾಡ್ನಲ್ಲಿ ನಡೆಸಲಾಯಿತು.
ಭಾರತೀಯ ಸೇನೆಯು ಸಕಲ ಗೌರವದೊಂದಿಗೆ ಅಂತಿಮ ನಮನ ಸಲ್ಲಿಸಿ ಝಡ್ಪಿ 5158 ವಿಶೇಷ ಸೇನಾ ಹೆಲಿಕಾಪ್ಟರ್ನಲ್ಲಿ ಪಾಲಕ್ಕಾಡ್ಗೆ ಶರೀರ ಕೊಂಡೊಯ್ಯಲಾಗಿತ್ತು. ಅಲ್ಲಿ ಅವರ ಅಂತ್ಯಕ್ರಿಯೆಯನ್ನು ಇಂದು ಮಧ್ಯಾಹ್ನದ ವೇಳೆಗೆ ನೆರವೇರಿಸಲಾಯಿತು.ಅವರ ಮೂಲ ಮನೆಯಲ್ಲಿ ಸರ್ಕಾರಿ ಮತ್ತು ಸೇನಾ ಗೌರವಗಳ ಬಳಿಕ ಗಾಳಿಯಲ್ಲಿ 3 ಸುತ್ತು ಗುಂಡು ಹಾರಿಸಲಾಯಿತು. ಈ ವೇಳೆ ಕೇರಳ ಸರ್ಕಾರದ ಸಚಿವರು,ಅಧಿಕಾರಿಗಳು, ಸೇನಾ ಪಡೆ ಮತ್ತು ಎನ್ಎಸ್ಜಿ ಕಮಾಂಡೊ ಪಡೆಗಳ ಅಧಿಕಾರಿಗಳು, ಸೈನಿಕರು ಉಪಸ್ಥಿತರಿದ್ದರು.
ಅಂತ್ಯ ಸಂಸ್ಕಾರದಲ್ಲಿ ಕುಟುಂಬದ ಸದಸ್ಯರಲ್ಲದೇ ಸಾವಿರಾರು ಸಂಖ್ಯೆಯಲ್ಲಿ ಸೇರಿದ್ದ ಜನರು ವೀರಯೋಧನಿಗೆ ಭಾವಪೂರ್ಣ ವಿದಾಯ ಹೇಳಿದರು.