ಅಹಮದಾಬಾದ್: ಪ್ರಖ್ಯಾತ ಶಾಸ್ತ್ರೀಯ ನೃತ್ಯ ಪಟು, ನೃತ್ಯ ಗುರು ಮೃಣಾಲಿನಿ ಸಾರಾಭಾಯಿ ಅವರು ಗುರುವಾರ ಬೆಳಗ್ಗೆ ಇಹಲೋಕ ತ್ಯಜಿಸಿದ್ದಾರೆ.
97 ವರ್ಷದ ಮೃಣಾಲಿನಿ ವೃದ್ಯಾಪ್ಯ ಸಂಬಂಧಿ ಖಾಯಿಲೆಯಿಂದ ಕೆಲ ದಿನಗಳ ಹಿಂದೆ ಅಹ್ಮದಾಬಾದ್ನಲ್ಲಿ ಆಸ್ಪತ್ರೆಗೆ ದಾಖಲಾಗಿದ್ದರು. ಖ್ಯಾತ ವಿಜ್ಞಾನಿ ದಿ. ವಿಕ್ರಮ್ ಸಾರಾಭಾಯಿಯವರನ್ನು ಮದುವೆಯಾಗಿದ್ದ ಮೃಣಾಲಿನಿ, ಪದ್ಮಭೂಷಣ ಪ್ರಶಸ್ತಿಯಿಂದ ಗೌರವಿತರಾಗಿದ್ದರು.
ಖ್ಯಾತ ಭೌತ ವಿಜ್ಞಾನಿ ,ಬಾಹ್ಯಾಕಾಶ ಸಂಶೋಧನಾ ಪಿತಾಮಹ ವಿಕ್ರಮ್ ಸಾರಾಭಾಯಿ ಅವರ ಪತ್ನಿಯಾಗಿದ್ದ ಮೃಣಾಲಿನಿ ಅವರು ತಮ್ಮ ಜೀವನವನ್ನು ನೃತ್ಯ ಮತ್ತು ನೃತ್ಯ ತರಬೇತಿಗಾಗಿ ಮುಡುಪಾಗಿಟ್ಟಿದ್ದರು. ಅವರು 18,000ಕ್ಕೂಹೆಚ್ಚು ಶಿಷ್ಯವರ್ಗವನ್ನು ಹೊಂದಿದ್ದರು. ಕೇರಳದ ಪಾಲಕ್ಕಾಡ್ ನಲ್ಲಿ ಜನಿಸಿದ್ದ ಮೃಣಾಲಿನಿ ಅವರು ಶಾಸ್ತ್ರೀಯ ನೃತ್ಯದ ಪ್ರಚಾರ ಮತ್ತು ತರಬೇತಿಗಾಗಿ ಅಹಮದಾಬಾದ್ನಲ್ಲಿ ದರ್ಪಣಂ ಎನ್ನುವ ಸಂಸ್ಥೆಯನ್ನು 1948 ರಲ್ಲಿ ಹುಟ್ಟುಹಾಕಿದ್ದರು.ಮೃಣಾಲಿನಿ ಅತ್ಯುನ್ನತ ಪ್ರಶಸ್ತಿಗಳಾದ ಪದ್ಮಭೂಷಣ ,ಪದ್ಮಶ್ರಿ ಪ್ರಶಸ್ತಿಗೆ ಭಾಜನರಾಗಿದ್ದರು. ವಿಶ್ವದೆಲ್ಲೆಡೆ ಸಾವಿರಾರು ಸನ್ಮಾನಗಳು ಅವರಿಗೆ ಸಂದಿವೆ.