ಹೊಸದಿಲ್ಲಿ: 2016-17 ಆರ್ಥಿಕ ವರ್ಷದ ರೈಲ್ವೆ ಬಜೆಟ್ ಕೇಂದ್ರ ರೈಲ್ವೇ ಸಚಿವ ಸುರೇಶ್ ಪ್ರಭು ಮಂಡಿಸುತ್ತಿದ್ದು, ಪ್ರಯಾಣಿಕರಿಗೆ, ಮಹಿಳೆಯರಿಗೆ, ಮಕ್ಕಳಿಗೆ, ದಿವ್ಯಾಂಗರಿಗೆ ಅನುಕೂಲವಾಗುವಂತೆ ಕೆಲವು ಯೋಜನೆ ಘೋಷಿಸಿದ್ದಾರೆ.
ಪ್ರಸ್ತುತ ಬಜೆಟ್ನಲ್ಲಿ ಮಹಿಳೆಯರಿಗೆ ರಕ್ಷಣೆ ನೀಡಲು ಪ್ರಾಧಾನ್ಯತೆ ನೀಡಬೇಕೆಂಬುದು ಎಲ್ಲರ ಒಕ್ಕೊರಲ ಒತ್ತಾಯವಾಗಿತ್ತು. ಅಂದ ಹಾಗೆ ಈ ಬಜೆಟ್ನಲ್ಲಿ ಮಹಿಳೆಯರಿಗೆ ಎಲ್ಲ ವಿಭಾಗದಲ್ಲಿಯೂ ಶೇ. 33 ಸೀಟುಗಳು ಮೀಸಲು ನೀಡಿದ್ದಾರೆ.
ಬಜೆಟ್ ನ ಪ್ರಮುಖ ಅಂಶಗಳು:
* ರೈಲ್ವೆ ಕಾರ್ಯವೈಖರಿಯಲ್ಲಿ ಬದಲಾವಣೆಯ ಅಗತ್ಯ
* ಪ್ರಯಾಣಿಕರ ಆದ್ಯತೆ, ರೈಲಿನ ವೇಗ ದೇಶದ ಪ್ರಗತಿಗೆ ಮೂಲ
* ಪ್ರಸಕ್ತ ವರ್ಷ ರೈಲ್ವೆಯಲ್ಲಿ ಶೇ.92ರಷ್ಟು ಅಭಿವೃದ್ಧಿ ಸಾಧಿಸೋ ಗುರಿಯಿದೆ
* ಸಾಮಾಜಿಕ ಜಾಲ ತಾಣದಿಂದ ರೈಲ್ವೇಗೆ ಅನುಕೂಲವಾಗಿದೆ
* ರೈಲು ವ್ಯವಸ್ಥೆ ಭಾರತೀಯ ಅರ್ಥ ವ್ಯವಸ್ಥೆಯ ಭಾಗವಾಗಿದೆ
* ಪ್ರಧಾನಿಯ ಕನಸುಗಳನ್ನು ನನಸಾಗಿಸುವುದೇ ನಮ್ಮ ಆಧ್ಯತೆ.
* ಕಳೆದ ವರ್ಷದ ಬಜೆಟ್ ನಿಂದ 8,720 ಸಾವಿರ ಕೋಟಿ ರೂಪಾಯಿ ಉಳಿಸಿದ್ದೇವೆ.
* ರೈಲ್ವೆ ವ್ಯವಸ್ಥೆ ಭಾರತೀಯ ಅರ್ಥ ವ್ಯವಸ್ಥೆಯ ಭಾಗವಾಗಿದೆ. ಪ್ರಸಕ್ತ ಸಾಲಿನಲ್ಲಿ ರೈಲ್ವೆಯಲ್ಲಿ ಶೇ.92ರಷ್ಟು ಅಭಿವೃದ್ಧಿ ಸಾಧಿಸೋ ಗುರಿ ಇದೆ.
* 20, 500 ಕಿಲೋ ಮೀಟರ್ ಬ್ರಾಡ್ ಗೇಜ್ ಗುರಿ ಹೊಂದಲಾಗಿದೆ. 65 ಸಾವಿರ ಹೆಚ್ಚುವರಿ ಉದ್ಯೋಗ ಸೃಷ್ಟಿಗೆ ಕ್ರಮ ಕೈಗೊಳ್ಳಲಾಗುವುದು.
* ವಾರಣಾಸಿ ಮತ್ತು ದೆಹಲಿ ನಡುವೆ ಹೊಸ ರೈಲು. ಜನರಲ್ ಬೋಗಿಗಳಲ್ಲೂ ಮೊಬೈಲ್ ಚಾರ್ಜ್ ಮಾಡಿಕೊಳ್ಳುವ ವ್ಯವಸ್ಥೆ.
* ಗುಣಮಟ್ಟದ ಸೇವೆಗಾಗಿ ಸಂಸದರ ನಿಧಿ ಹಣ ಬಳಕೆ. ಈಗಾಗಲೇ 124 ಸಂಸದರು ಹಣ ನೀಡುವುದಾಗಿ ಭರವಸೆ. ದೇಶದ 477 ರೈಲ್ವೆ ನಿಲ್ದಾಣದಲ್ಲಿ ಬಯೋ ಟಾಯ್ಲೆಟ್.
* ವಿಶ್ವದ ಮೊದಲ ಬಯೋ ವ್ಯಾಕ್ಯೂಮ್ ಟಾಯ್ಲೆಟ್ ನಮ್ಮ ರೈಲ್ವೆನಲ್ಲಿ ಪರಿಚಯಿಸಲಾಗಿದೆ. ಈ ವರ್ಷದಲ್ಲಿ 17 ಸಾವಿರ ಬಯೋ ಟಾಯ್ಲೆಟ್ ಸ್ಥಾಪನೆ
* ಮುಂದಿನ ವರ್ಷ 2,800 ಕಿಲೋ ಮೀಟರ್ ಹೊಸ ಹಳಿ ನಿರ್ಮಾಣ. ಪ್ರಯಾಣಿಕರಿಂದ ಪ್ರತಿಕ್ರಿಯೆ ಪಡೆಯಲು ಪಿವಿಆರ್ ವ್ಯವಸ್ಥೆ.
* ರೈಲ್ವೆಯ ಎಲ್ಲಾ ಹುದ್ದೆಗಳಿಗೂ ಆನ್ ಲೈನ್ ಮೂಲಕ ನೇಮಕಾತಿ. ರೈಲ್ವೆಯಲ್ಲಿ ಮೇಕ್ ಇನ್ ಇಂಡಿಯಾ ಯೋಜನೆ ಅಳವಡಿಕೆ. ಈ ವರ್ಷ 1600 ಕಿಮೀ ಉದ್ದ ವಿದ್ಯುದ್ದೀಕರಣ.
* ರೈಲ್ವೆ ಉಪಕರಣ ತಯಾರಿಸಲು ಮೇಕ್ ಇಂಡಿಯಾ ಯೋಜನೆಯಡಿ 2 ಕಾರ್ಖಾನೆಗಳ ನಿರ್ಮಾಣ. 2,800 ಹೊಸ ಮಾರ್ಗಗಳ ನಿರ್ಮಾಣಕ್ಕೆ ನಿರ್ಧಾರ.
* ಪ್ರಯಾಣಿಕರ ರೈಲು ವೇಗ ಸರಾಸರಿ ಗಂಟೆಗೆ 8 ಕಿಲೋ ಮೀಟರ್ ಗೆ ಏರಿಸಲು ಕ್ರಮ
* 2020ರ ವೇಳೆಗೆ ಶೇ.95ರಷ್ಟು ರೈಲುಗಳು ಸಮಯಕ್ಕೆ ಸರಿಯಾಗಿ ಓಡಲಿವೆ. 2020ರ ವೇಳೆಗೆ ಬೇಕೆಂದಾಗ ಟಿಕೆಟ್ ಸಿಗುವ ವ್ಯವಸ್ಥೆ
* ಈ ವರ್ಷ 1600 ಕಿಲೋ ಮೀಟರ್ ರೈಲ್ವೆ ಮಾರ್ಗ ವಿದ್ಯುದ್ದೀಕರಣ.ರೈಲ್ವೆ ಇಲಾಖೆ ಅಭಿವೃದ್ಧಿಗಾಗಿ 8.5 ಲಕ್ಷ ಕೋಟಿ ಹೂಡಿಕೆಗೆ ನಿರ್ಧಾರ.
* ಪ್ರಸಕ್ತ ಸಾಲಿನಲ್ಲಿ ರೈಲ್ವೆಯಿಂದ 184,820 ಸಾವಿರ ಕೋಟಿ ರೂಪಾಯಿ ಆದಾಯದ ಗುರಿ ಹೊಂದಿದ್ದೇವೆ.
* 2020ರೊಳಗೆ ಮಾನವರಹಿತ ಕ್ರಾಸಿಂಗ್ ತೆಗೆದುಹಾಕಲಾಗುವುದು. ಮುಂದಿನ 5 ವರ್ಷಗಳಲ್ಲಿ ರೈಲ್ವೆಯ ಮೂಲಕ ಸೌಕರ್ಯ ಅಭಿವೃದ್ಧಿ
* 1.5ಲಕ್ಷ ಕೋಟಿ ರೂಪಾಯಿ ಹೂಡಿಕೆ ಮಾಡಲು ಎಲ್ ಐಸಿ ಒಪ್ಪಿದೆ. ಜನರ ಪ್ರಯಾಣ ಸುಖಕರವಾಗಿರಬೇಕೆನ್ನುವುದೇ ನಮ್ಮ ಉದ್ದೇಶ. ಎಲ್ಲರಿಗೂ ರಿಸರ್ವೇಶನ್ ಸಿಗಬೇಕು ಎಂಬ ಉದ್ದೇಶ ಹೊಂದಿದ್ದೇವೆ.
*ಪ್ರಯಾಣಿಕರ ಟಿಕೆಟ್ ದರದಲ್ಲಿ ಯಾವುದೇ ಬದಲಾವಣೆ ಇಲ್ಲ
*ರೈಲಿನಲ್ಲಿ ಮಕ್ಕಳಿಗೆ ಸಿಗುತ್ತೆ ಬಿಸಿ ಹಾಲು, ಬಿಸಿ ನೀರು
*ರೈಲು ನಿಲ್ದಾಣಗಳಲ್ಲಿ ಮಕ್ಕಳು, ತಾಯಂದಿರಿಗೆ ವಿಶೇಷ ವ್ಯವಸ್ಥೆ
*ಮಕ್ಕಳಿಗಾಗಿ ಬೇಬಿ ಫುಡ್, ಬೇಬಿ ಬೋರ್ಡ್ ವ್ಯವಸ್ಥೆ
*ಮಹಿಳೆಯರಿಗೆ, ಹಿರಿಯ ನಾಗರಿಕರಿಗೆ ಲೋವರ್ ಬರ್ತ್ ಕೋಟಾ ಹೆಚ್ಚಳ
*ರೈಲು ಬೋಗಿಗಳ ಒಳಗೆ ಎಲ್ ಇಡಿ ಮಾಹಿತಿ ಬೋರ್ಡ್ ಗಳ ಅಳವಡಿಕೆ
*ಈ ವರ್ಷ 100 ರೈಲು ನಿಲ್ದಾಣಗಳಲ್ಲಿ ವೈಫೈ ಇಂಟರ್ನೆಟ್ ಸೇವೆ ಅನುಷ್ಠಾನ
*ಗೋ ಇಂಡಿಯಾ ಸ್ಮಾರ್ಟ್ ಕಾರ್ಡ್ ಮತ್ತು ಆ್ಯಪ್ ಬಳಸಿ ಟಿಕೆಟ್ ಖರೀದಿ
*ಇಂಟರ್ನೆಟ್ ಮೂಲಕ ಗಾಲಿಕುರ್ಚಿ ಸೇವೆ ಬುಕ್ ಮಾಡಲು ಅವಕಾಶ
*ಮುಂದಿನ 2 ವರ್ಷಗಳಲ್ಲಿ 400 ರೈಲ್ವೆ ನಿಲ್ದಾಣಗಳಲ್ಲಿ ವೈಫೈ ವ್ಯವಸ್ಥೆ
*ಜನರಲ್ ಬೋಗಿಗಳಲ್ಲಿ ದುಡ್ಡು ನೀಡಿ ಟಿಕೆಟ್ ಪಡೆಯುವ ವ್ಯವಸ್ಥೆ ಕಲ್ಪಿಸಲಾಗುವುದು
*ಸಾಮಾನ್ಯ ಪ್ರಯಾಣಿಕರಿಗಾಗಿ ಅಂತ್ಯೋದಯ, ದೀನ್ ದಯಾಳ್ ಎಕ್ಸ್ ಪ್ರೆಸ್ ರೈಲು
*ಟಿಕೆಟ್ ನಿಗದಿ ಪಡಿಸದವರಿಗೆ ಪ್ರತ್ಯೇಕ ಬೋಗಿಗಳ ವ್ಯವಸ್ಥೆ
*ರೈಲ್ವೆ ನಿಲ್ದಾಣಗಳಲ್ಲಿ ವಿಶ್ರಾಂತಿ ಕೊಠಡಿ ಬುಕ್ಕಿಂಗ್ ಗೆ ಆನ್ ಲೈನ್ ವ್ಯವಸ್ಥೆ
*ಅಂತ್ಯೋದಯ ಎಕ್ಸ್ ಪ್ರೆಸ್ ನಲ್ಲಿ ಪ್ರಯಾಣಿಸಲು ರಿಸರ್ವೇಶನ್ ಬೇಕಾಗಿಲ್ಲ
*ಹಮ್ ಸಫರ್ ರೈಲಿನಲ್ಲಿ ಕೇವಲ 3 ಟಯರ್ ಇರುವ ಎಸಿಗಳನ್ನು ಅಳವಡಿಸಲಾಗುವುದು
*ರೈಲು ನಿಲ್ದಾಣಗಳ ಮಳಿಗೆಗಳಲ್ಲಿ ಔಷಧ, ಹಾಲು ಸಿಗುವಂತೆ ವ್ಯವಸ್ಥೆ
*ಪ್ರಯಾಣಿಕರ ಮನರಂಜನೆಗಾಗಿ ಕೆಲವು ರೈಲುಗಳಲ್ಲಿ ಎಫ್ ಎಂ ರೇಡಿಯೋ ವ್ಯವಸ್ಥೆ
*ಮಹಿಳಾ ಪ್ರಯಾಣಿಕರಿಗಾಗಿ 24/7 ಹೆಲ್ಫ್ ಲೈನ್ ವ್ಯವಸ್ಥೆ
*ಎಲ್ಲಾ ವಿಭಾಗಗಳಲ್ಲಿ ಮಹಿಳೆಯರಿಗೆ ಶೇ.33ರಷ್ಟು ಮೀಸಲಾತಿ