ಹೊಸದಿಲ್ಲಿ: ಡಬ್ಲ್ಯೂ ಡಬ್ಲ್ಯೂಇ ದಂತಕತೆ ದಿ ಗ್ರೇಟ್ ಖಲಿ ಎಂದೇ ಖ್ಯಾತರಾಗಿರುವ ಕುಸ್ತಿಪಟು ದಲೀಪ್ ಸಿಂಗ್ ರಾಣಾಗೆ ಉತ್ತರಾಖಂಡದ ಹಲ್ ದ್ವಾನಿಯಲ್ಲಿ ನಡೆದ ಕುಸ್ತಿ ಪಂದ್ಯಾಟದಲ್ಲಿ ಗಂಭಿರ ಗಾಯಗಳಾಗಿದ್ದು ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಮೂಲಗಳಿಂದ ತಿಳಿದು ಬಂದಿದೆ.
ದಲೀಪ್ ಸಿಂಗ್ ಗಂಭೀರ ಗಾಯಗೊಳ್ಳಲು ವಿದೇಶಿ ಕುಸ್ತಿಪಟುಗಳು ಕಾರಣ ಎಂದು ಮೂಲಗಳಿಂದ ಬಂದಿದೆ. ಉತ್ತರಾಖಂಡದ ರಾಜೀವ್ ಗಾಂಧಿ ಅಂತಾರಾಷ್ಟ್ರೀಯ ಸ್ಟೇಡಿಯಂನಲ್ಲಿ ನಡೆದ ಕುಸ್ತಿ ಪ್ರದರ್ಶನದಲ್ಲಿ ಮೊದಲ ಪ್ರದರ್ಶನ ನೀಡುವ ಸಂದರ್ಭ ಅವರಿಗೆ ಗಾಯಗಳಾಗಿದೆ ಎಂದು ತಿಳಿದು ಬಂದಿದೆ.
ನಾಲ್ಕು ಹಾಲಿವುಡ್, ಎಡು ಬಾಲಿವುಡ್ ಸಿನೆಮಾಗಳನ್ನೂ ಮಾಡಿರುವ ಅವರು, ಪಂಜಾಬ್ ಪೊಲೀಸ್ ಇಲಾಖೆಯಲ್ಲಿ ಸೇವೆ ಸಲ್ಲಿಸುತ್ತಿದ್ದರು. ನಂತರ ವೃತ್ತಿಪರ ಕುಸ್ತಿಪಟುವಾಗಿ ಖ್ಯಾತರಾದರು.