ಹೊಸದಿಲ್ಲಿ: 2016-17ನೇ ಸಾಲಿನ ಕೇಂದ್ರ ಬಜೆಟ್ ಮಂಡನೆ ಆರಂಭವಾಗಿದ್ದು, ವಿಶ್ವ ಆರ್ಥಿಕತೆ ಸಂಕಷ್ಟದಲ್ಲಿರುವ ಹೊತ್ತಿನಲ್ಲಿ ನಾವು ಬಜೆಟ್ ಮಂಡನೆ ಮಾಡುತ್ತಿದ್ದೇವೆ. ಆದರೆ ಭಾರತದ ಆರ್ಥಿಕತೆ ಸ್ಥಿರವಾಗಿದೆ ಎಂದು ಅರುಣ್ ಜೇಟ್ಲಿ ಹೇಳಿದರು.
ಬಜೆಟ್ ಮಂಡನೆಯ ಮುಖ್ಯಾಂಶಗಳು:
*10 ಸರ್ಕಾರಿ ಮತ್ತು 10 ಖಾಸಗಿ ಶಿಕ್ಷಣ ಸಂಸ್ಥೆಗಳು ವಿಶ್ವದರ್ಜೆಗೆ ಉನ್ನತೀಕರಣ
*62 ನವೋದಯ ವಿದ್ಯಾಲಯಗಳ ಸ್ಥಾಪನೆ
*ಗ್ರಾಮೀಣ ಪ್ರದೇಶಗಳಲ್ಲಿ ‘ಡಿಜಿಟಲ್ ಸಾಕ್ಷರತೆ’ ಅಭಿಯಾನ
*ಹಳೇ ವಿಮಾನ ನಿಲ್ದಾಣಗಳ ಅಭಿವೃದ್ಧಿಗೆ ಹೆಚ್ಚಿನ ಒತ್ತು
*ನರೇಗಾ ಯೋಜನೆಗೆ 38,500 ಕೋಟಿ
*ಭಾರತದಲ್ಲಿ ತಯಾರಿಸುವ ಆಹಾರ ಉತ್ಪನ್ನಗಳ ಮಾರಾಟ ಕ್ಷೇತ್ರದಲ್ಲಿ ಶೇ 100ರಷ್ಟು ವಿದೇಶಿ ನೇರ ಬಂಡವಾಳ ಹೂಡಿಕೆಗೆ (ಎಫ್ಡಿಐ) ಅವಕಾಶ
*ಬಂಧರುಗಳ ಅಭಿವೃದ್ಧಿಗೆ 800 ಕೋಟಿ ರೂಪಾಯಿ
*ದೇಶದ ಎಲ್ಲಾ ರಸ್ತೆಗಳ ಅಭಿವೃದ್ಧಿಗಾಗಿ 97 ಸಾವಿರ ಕೋಟಿ
*ಪ್ರಸಕ್ತ ವರ್ಷ 10 ಸಾವಿರ ಕಿ.ಮೀ ರಾಷ್ಟ್ರೀಯ ಹೆದ್ದಾರಿ ನಿರ್ಮಾಣ
*ಆಳ ಸಮುದ್ರದಲ್ಲಿ ಅನಿಲ ಉತ್ಪಾದನೆಗೆ ಉತ್ತೇಜನ
*ಮೋಟಾರ್ ಕಾಯ್ದೆಗೆ ತಿದ್ದುಪಡಿ1,500 ಬಹು ಕೌಶಲ ಅಭಿವೃದ್ಧಿ ಕೇಂದ್ರಗಳ ಸ್ಥಾಪನೆಗೆ 1,700 ಕೋಟಿ
*ಪ್ರತಿ ಕುಟುಂಬಕ್ಕೆ 1ಲಕ್ಷದವರೆಗೆ ಆರೋಗ್ಯ ಮಿಮೆ ಪ್ರಧಾನಿ ಜನ ಔಷಧಿ ಯೋಜನೆಯಡಿ 300ಕ್ಕೂ ಹೆಚ್ಚು ಜೀವರಕ್ಷಕ ಜೌಷಧ ಅಂಗಡಿ ಆರಂಭ
*ಸ್ಟ್ಯಾಂಡ್ ಅಪ್ ಇಂಡಿಯಾ ಯೋಜನೆಗೆ 500 ಕೋಟಿ ಅನುದಾನ. ಈ ಯೋಜನೆಯಡಿ ಪರಿಶಿಷ್ಟ ಜಾತಿ ಮತ್ತು ಪಂಗಡದ ಮಹಿಳಾ ಉದ್ಯಮಿಗಳಿಗೆ ಬ್ಯಾಂಕುಗಳ ಮೂಲಕ ಹಣಕಾಸಿನ ನೆರವು.
*ರಸ್ತೆ ಮತ್ತು ಹೆದ್ದಾರಿ ಅಭಿವೃದ್ಧಿಗೆ 55 ಸಾವಿರ ಕೋಟಿ
*ಮುಂದಿನ 3 ವರ್ಷಗಳಲ್ಲಿ ಪ್ರಧಾನಿ ಕೌಶಲ ವಿಕಾಸ ಯೋಜನೆಯಡಿ 1 ಕೋಟಿ ಯುವಕರಿಗೆ ವೃತ್ತಿ ತರಬೇತಿ
*ಜಿಲ್ಲಾ ಆಸ್ಪತ್ರೆಗಳಲ್ಲಿ ಉಚಿತ ಡಯಾಲಿಸಸ್ ಯೋಜನೆ ಜಾರಿ
*ಗ್ರಾಮೀಣ ಪ್ರದೇಶದಲ್ಲಿ ಡಿಜಿಟಲ್ ಸಾಕ್ಷರತಾ ಯೋಜನೆ
*ಸಾವಯವ ಸಮಗ್ರ ಕೃಷಿ ಅಭಿವೃದ್ಧಿಗೆ ಯೋಜನೆ
*ಸ್ವಚ್ಛ ಭಾರತ ಯೋಜನೆಗೆ 9 ಸಾವಿರ ಕೋಟಿ ರೂಪಾಯಿ ಮೀಸಲು
*ಬಡವರಿಗಾಗಿ ಸ್ವಸ್ಥ ಭೀಮಾ ಯೋಜನೆ
*ರೈತರಿಗಾಗಿ ಇ–ಮಾರ್ಕೆಟಿಂಗ್ ಫ್ಲಾಟ್ ಫಾರಂ
*ರೈತರ ಸಾಲ ಯೋಜನೆಗೆ 9 ಸಾವಿರ ಕೋಟಿ ರೂಪಾಯಿ ಮೀಸಲು
*ರೈತರಿಗಾಗಿ ಪ್ರಧಾನ ಮಂತ್ರಿ ಫಸಲ್ ಭೀಮಾ ಯೋಜನೆ
*7ನೇ ವೇತನ ಆಯೋಗದ ಜಾರಿಯಿಂದ ಮುಂದಿನ ಹಣಕಾಸು ವರ್ಷದಲ್ಲಿ ಹೆಚ್ಚಿನ ಆರ್ಥಿಕ ಹೊರೆ
*ಪ್ರಧಾನಮಂತ್ರಿ ಗ್ರಾಮ್ ಸಡಕ್ ಯೋಜನೆಗೆ 19 ಸಾವಿರ ಕೋಟಿ ರೂಪಾಯಿ ಮೀಸಲು
*ನೀರಾವರಿ ಯೋಜನೆಗಳಿಗೆ 17 ಸಾವಿರ ಕೋಟಿ ರೂಪಾಯಿ ಮೀಸಲು
*ರೈತರಿಗೆ ಮಣ್ಣು ಆರೋಗ್ಯ ಪರಿಶೀಲಿಸಲು ‘ಸಾಯಿಲ್ ಹೆಲ್ತ್ ಕಾರ್ಡ್’
*ರೈತರಿಗಾಗಿ 35.984.000 ಕೋಟಿ ರೂಪಾಯಿ ನಿಧಿ ಮೀಸಲು
*ಬಡ ಕುಟುಂಬಗಳಿಗೆ ಆರೋಗ್ಯ ವಿಮೆ ಯೋಜನೆ
*ವಿಶ್ವ ಮಾರುಕಟ್ಟೆ ಅಭಿವೃದ್ಧಿ ದರ ಕುಂಠಿತವಾಗುತ್ತಿದೆ
*ಬಿಪಿಎಲ್ ಕುಟುಂಬಗಳಿಗೆ ಸಬ್ಸಿಡಿ ದರದಲ್ಲಿ ಎಲ್ಪಿಜಿ
*ಆಂತರಿಕ ಹಣಕಾಸು ವ್ಯವಸ್ಥೆ ಸ್ಥಿರವಾಗಿದೆ. ಹೀಗಾಗಿ ಚಾಲ್ತಿ ಖಾತೆ ಕೊರತೆಯು (ಸಿಎಡಿ) ಈ ವರ್ಷ ಜಿಡಿಪಿಯ ಶೇ 1.4ಕ್ಕೆ ಇಳಿಕೆ
*ಸಮಾಜದ ಶೋಷಿತ ವರ್ಗಗಳ ಏಳಿಗೆಗೆ ವಿವಿಧ ಯೋಜನೆಗಳು
*ಕೃಷಿ, ಮೂಲಸೌಕರ್ಯ, ಗ್ರಾಮೀಣ ಕ್ಷೇತ್ರಗಳಿಗೆ ಹೆಚ್ಚಿನ ಅನುದಾನ
*ಗ್ರಾಮೀಣ ಮೂಲ ಸೌಕರ್ಯಕ್ಕೆ ಆದ್ಯತೆ
*ಮೂರನೇ ಬಾರಿಗೆ ಬಜೆಟ್ ಮಂಡಿಸುತ್ತಿರುವ ಅರುಣ್ ಜೇಟ್ಲಿ
*ಭಾರತದ ಜಿಡಿಪಿ 7.6ಕ್ಕೆ ಹೆಚ್ಚಳವಾಗ ಬೇಕಿದೆ
*ವಿಶ್ವ ಆರ್ಥಿಕ ಸಂಸ್ಥೆಯಿಂದ ದೇಶದ ಆರ್ಥಿಕ ವ್ಯವಸ್ಥೆಗೆ ಮೆಚ್ಚುಗೆ
*ಐಎಂಎಫ್ ಸೇರಿದಂತೆ ಜಾಗತಿಕ ಮಟ್ಟದ ಹಣಕಾಸು ಸಂಸ್ಥೆಗಳಿಂದ ಭಾರತದ ಆರ್ಥಿಕೆತೆಗೆ ಮೆಚ್ಚುಗೆ
*ಭಾರತದ ಅರ್ಥ ವ್ಯವಸ್ಥೆ ಸ್ಥಿರವಾಗಿದೆ; ಆರ್ಥಿಕ ವೃದ್ಧಿ ದರದಲ್ಲಿ ಸಮತೋಲನ ಕಾಯ್ದುಕೊಳ್ಳಲಾಗುವುದು.
ಅರುಣ್ ಜೇಟ್ಲಿಯಿಂದ 2016-17ನೇ ಸಾಲಿನ ಕೇಂದ್ರ ಬಜೆಟ್ ಮಂಡನೆ - 1 min read
Photo Credit :
ಹನಿ ಹನಿ ಕೂಡಿ ಹಳ್ಳ
ನ್ಯೂಸ್ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.