News Kannada
Wednesday, October 05 2022

ದೇಶ-ವಿದೇಶ

ಮಹಾರಾಷ್ಟ್ರದ ಹೊರಗಿನಿಂದ ಗೋಮಾಂಸವನ್ನು ಖರೀದಿಸಬಹುದು: ಬಾಂಬೇ ಹೈಕೋರ್ಟ್ - 1 min read

Photo Credit :

ಮಹಾರಾಷ್ಟ್ರದ ಹೊರಗಿನಿಂದ ಗೋಮಾಂಸವನ್ನು ಖರೀದಿಸಬಹುದು: ಬಾಂಬೇ ಹೈಕೋರ್ಟ್

ಮುಂಬಯಿ: ಮಹಾರಾಷ್ಟ್ರ ಸರ್ಕಾರದ ಗೋಹತ್ಯೆ ನಿಷೇಧ ಕಾನೂನನ್ನು ಬಾಂಬೆ ಹೈಕೋರ್ಟ್ ಎತ್ತಿ ಹಿಡಿದಿದ್ದು, ಮಹಾರಾಷ್ಟ್ರದ ಹೊರಗಿನಿಂದ ಗೋಮಾಂಸವನ್ನು ಖರೀದಿಸಿ ತಂದಿರಿಸಿಕೊಂಡರೆ ಅದು ಕ್ರಿಮಿನಲ್ ಅಪರಾಧ ಆಗುವುದಿಲ್ಲ ಎಂದು ಬಾಂಬೇ ಹೈಕೋರ್ಟ್ ಹೇಳಿದೆ.

Court says possessing beef no crime, upholds slaughter ban-1ಮಹಾರಾಷ್ಟ್ರ ಸರ್ಕಾರ 2015 ರ ಮಾರ್ಚ್ ನಲ್ಲಿ ಗೋಹತ್ಯೆ, ಗೋಮಾಂಸ ನಿಷೇಧ ಕಾನೂನನ್ನು ಜಾರಿಗೊಳಿಸಿತ್ತು. ಕಾನೂನು ಉಲ್ಲಂಘನೆ ಮಾಡಿದವರಿಗೆ 10 ಸಾವಿರ ರೂಪಾಯಿ ದಂಡ ಹಾಗೂ 5 ವರ್ಷಗಳ ಜೈಲು ಶಿಕ್ಷೆಯನ್ನು ವಿಧಿಸಿತ್ತು. ಕಾನೂನಿನ ಸೆಕ್ಷನ್ 5 ಡಿ ಪ್ರಕಾರ ಮಹಾರಾಷ್ಟ್ರದಲ್ಲಿ ಗೋಹತ್ಯೆ ಮಾಡದೆ ಹೊರಗಿನಿಂದ ಗೋಮಾಂಸ ಖರೀದಿಸುವುದೂ ಸಹ ಅಪರಾಧವಾಗಿತ್ತು. ಈ ಅಪರಾಧ ಎಸಗಿದವರಿಗೆ 2 ,000 ರೂ ದಂಡ ಹಾಗೂ ಒಂದು ವರ್ಷದ ಜೈಲು ಶಿಕ್ಷೆ ವಿಧಿಸಬಹುದಿತ್ತು.

ಮಹಾರಾಷ್ಟ್ರದಲ್ಲಿ ಹೇರಲಾಗಿರುವ ಗೋಮಾಂಸ ಮೇಲಿನ ನಿಷೇಧಕ್ಕಿರುವ ಸಾಂವಿಧಾನಿಕ ಸಿಂಧುತ್ವನ್ನು ಪ್ರಶ್ನಿಸಿ ಸಲ್ಲಿಸಲಾಗಿದ್ದ ಹಲವಾರು ಅರ್ಜಿಗಳ ವಿಚಾರಣೆಯನ್ನು ನಡೆಸಿದ್ದ ಬಾಂಬೆ ಹೈಕೋರ್ಟ್‌ನ ಜಸ್ಟಿಸ್‌ ಎ ಎಸ್‌ ಓಕಾ ಮತ್ತು ಎಸ್‌ ಸಿ ಗುಪ್ತೆ  ಅವರನ್ನು ಒಳಗೊಂಡ ವಿಭಾಗೀಯ ಪೀಠವು , ಈ ವರ್ಷ ಜನವರಿಯಲ್ಲಿ ತನ್ನ ತೀರ್ಪನ್ನು ಕಾದಿರಿಸಿತ್ತು. ಇಂದು ಅದು ತನ್ನ ತೀರ್ಪನ್ನು ಪ್ರಕಟಿಸಿತು. ಬಾಂಬೆ ಹೈಕೋರ್ಟ್‌ ಈ ವಿಷಯದಲ್ಲಿ ಇಂದು ಪ್ರಕಟಿಸಿರುವ ತೀರ್ಪಿನ ಪ್ರಕಾರ ಮಹಾರಾಷ್ಟ್ರದಲ್ಲಿ ಗೋಮಾಂಸ ಮೇಲಿನ ನಿಷೇಧವು ಮುಂದುವರಿಯುತ್ತದೆ. ದನ ಮತ್ತು ಎಮ್ಮೆ ಮಾಂಸ ಮಾರಾಟ ಮೇಲಿನ ನಿಷೇಧ ಮುಂದುವರಿಯುವುದಾದರೂ ಮಹಾರಾಷ್ಟ್ರದ ಹೊರಗಿನಿಂದ ದನದ ಮತ್ತು ಎಮ್ಮೆಯ ಮಾಂಸವನ್ನು ತಂದಿರಿಸಿಕೊಂಡಲ್ಲಿ  ಅದು ಕ್ರಿಮಿನಲ್‌ ಅಪರಾಧ ಆಗುವುದಿಲ್ಲ  ಎಂದು ಹೈಕೋರ್ಟ್ ತಿಳಿಸಿದೆ.

See also  ಹಸ್ತಾಂತರ ವಿರುದ್ಧ ಮೇಲ್ಮನವಿ ಸಲ್ಲಿಸಲು ಮಲ್ಯ ನಿರ್ಧಾರ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

Subscribe to our Brand New YouTube Channel

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು