ಹೊಸದಿಲ್ಲಿ: ಖಲಿಸ್ತಾನ್ ಲಿಬರೇಷನ್ ಫೋರ್ಸ್ನ(ಕೆ ಎಲ್ ಎಫ್) ಮುಖ್ಯಸ್ಥ ಹರ್ಮಿಂದರ್ ಸಿಂಗ್ ಮಿಂಟೂ ಜೊತೆಗೆ ಐವರು ಉಗ್ರರು ಪರಾರಿಯಾಗಿರುವ ಘಟನೆ ಭಾನುವಾರ ಬೆಳಗ್ಗೆ ಪಂಜಾಬ್ನ ನಭ ಜೈಲಿನಲ್ಲಿ ನಡೆದಿದ್ದು, ಈ ಘಟನೆ ನಡೆದ ಕೇವಲ 24ಗಂಟೆಯೆಳಗಡೆ ದೆಹಲಿ ಮತ್ತು ಪಂಜಾಬ್ ಪೋಲಿಸರು ಹರ್ಮಿಂದರ್ ಸಿಂಗ್ನ್ನು ಬಂಧಿಸಿದ್ದಾರೆ.
ಈತನೊಂದಿಗೆ ಪರಾರಿಯಾದ 5 ಮಂದಿ ಉಗ್ರರು ನಾಪತ್ತೆಯಾಗಿದ್ದು, ಇನ್ನಳಿದ ಉಗ್ರರ ಬಂಧನಕ್ಕೂ ಪೋಲೀಸರು ವ್ಯಾಪಕ ಕಾರ್ಯಾಚರಣೆ ನಡೆಸುತ್ತಿದ್ದಾರೆ. ಖಲಿಸ್ತಾನ ಲಿಬರೇಷನ್ ಫ್ರಂಟ್ ಸಂಘಟನೆಯ ಅಡಿಯಲ್ಲಿ 10 ಕ್ಕೂ ಹೆಚ್ಚು ದುಷ್ಕೃತ್ಯಗಳಲ್ಲಿ ಹರ್ಮಿಂದರ್ ಸಿಂಗ್ ಆರೋಪಿಯಾಗಿದ್ದು, ಪಾಕಿಸ್ತಾನದ ಐಎಸ್ ಐ ನೊಂದಿಗೂ ನಂಟು ಹೊಂದಿದ್ದ ಈತನನ್ನು ಇಂದಿರಾಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ದೆಹಲಿಯಲ್ಲಿ 2 ವರ್ಷಗಳ ಹಿಂದೆ ಬಂದಿಸಲಾಗಿತ್ತು.
ಜೈಲಿನ ಮೇಲೆ ಶಸ್ತ್ರಾಸ್ತ್ರಧಾರಿಗಳ ಗುಂಪೊಂದು ಭಾನುವಾರ ದಾಳಿ ಮಾಡಿದ್ದರು. ಸುಮಾರು 200 ಸುತ್ತು ಗುಂಡು ಹಾರಿಸಿದ 10 ಬಂದೂಕುದಾರಿಗಳು ಪೊಲೀಸರ ಸಮವಸ್ತ್ರ ಧರಿಸಿ ಬಂದಿದ್ದು, ಇಡೀ ದೇಶವೇ ಬೆಚ್ಚಿ ಬೀಳುವಂತೆ ಪಂಜಾಬ್ ನಭಾ ಜೈಲಿನ ಮೇಲಿನ ಉಗ್ರ ದಾಳಿ ಮಾಡಿದ್ದರು. ಇದಕ್ಕೆ ಪ್ರತಿಯಾಗಿ ನಿನ್ನೆ ರಾತ್ರಿ ಪಂಜಾಬ್ ಮತ್ತು ದೆಹಲಿ ಪೊಲೀಸರು ದೆಹಲಿಯಲ್ಲಿ ಕ್ಷಿಪ್ರಕಾರ್ಯಾಚರಣೆ ನಡೆಸುವ ಮೂಲಕ ಉಗ್ರ ಹರ್ಮಿಂದರ್ ಸಿಂಗ್ ನನ್ನು ಬಂಧಿಸಿದ್ದಾರೆ.