ಹೊಸದಿಲ್ಲಿ: ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ಕರೋಲಾ ಬಾಗ್ ನ ಹೊಟೇಲ್ ವೊಂದರ ಮೇಲೆ ದಾಳಿ ನಡೆಸಿದ್ದು ಬರೋಬ್ಬರಿ 3.25 ಕೋಟಿ ರೂ ಹಳೆಯ ನೋಟುಗಳನ್ನು ವಶಪಡಿಸಿಕೊಂಡಿದ್ದಾರೆ. ಜೊತೆಗೆ ಐವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.
ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ವಶಪಡಿಸಿಕೊಂಡಿರುವ ಹಣ ಮುಂಬೈಯ ಹವಾಲ ನಿರ್ವಾಹಕರದ್ದು ಎಂದು ತಿಳಿದು ಬಂದಿದೆ. 500. 1000 ರೂ ಹಳೆಯ ನೋಟುಗಳಿದ್ದು, ಈ ಹಣವು ಸ್ಕ್ಯಾನಿಂಗ್ ನಿಂದಲೂ ಬಹಿರಂಗವಾಗದಂತೆ ಪ್ಯಾಕ್ ಮಾಡಿಟ್ಟಿದ್ದು ಅಧಿಕಾರಿಗಳು ಆಶ್ಚರ್ಯಗೊಂಡಿದ್ದಾರೆ.