ನವದೆಹಲಿ: ದೆಹಲಿ ಮುಖ್ಯಮಂತ್ರಿ, ಆಮ್ ಆದ್ಮಿ ಪಕ್ಷದ ಅರವಿಂದ್ ಕೇಜ್ರಿವಾಲ್ ಅವರು ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಕೂಡಲೇ ಪ್ರಧಾನಿ ನರೇಂದ್ರ ಮೋದಿ ಅವರ ವೈಯಕ್ತಿಕ ಭ್ರಷ್ಟಾಚಾರದ ಮಾಹಿತಿಯನ್ನು ಹೊರಗೆಳೆಯಬೇಕೆಂದು ಹೇಳಿದ್ದಾರೆ.
ಕೇಜ್ರಿವಾಲ್ ಟ್ವೀಟ್ ಮಾಡಿ ರಾಹುಲ್ ಜೀ…ಪ್ರಧಾನಿ ಮೋದಿ ಅವರ ವೈಯಕ್ತಿಕ ಭ್ರಷ್ಟಾಚಾರದ ವಿವರವನ್ನು ನೀವು ಯಾವಾಗ ಬಹಿರಂಗಪಡಿಸುತ್ತೀರಿ ಎಂದು ಕೇಳಿದ್ದಾರೆ.
ಮೋದಿ ಅವರ ವೈಯಕ್ತಿಕ ಭ್ರಷ್ಟಾಚಾರದ ಮಾಹಿತಿ ನನ್ನ ಬಳಿ ಇದ್ದು, ಅದನ್ನು ಲೋಕಸಭೆಯಲ್ಲೇ ಬಹಿರಂಗಪಡಿಸಲಿದ್ದೇನೆ. ಆದರೆ ಪ್ರಧಾನಿ ಮೋದಿ ಇದಕ್ಕೆ ಅವಕಾಶ ನೀಡುತ್ತಿಲ್ಲ. ಎಂದು ಕೇಜ್ರಿವಾಲ್ ಆರೋಪ ಮಾಡಿದ್ದಾರೆ.