ಬೊಗೊಟ: ಕೊಲಂಬಿಯಾದ ಕಾರ್ಗೋ ವಿಮಾನವೊಂದು ಮಂಗಳವಾರ ಪತನವಾಗಿದ್ದು, ಫಟನೆಯಲ್ಲಿ ಐವರು ಸಿಬ್ಬಂದಿ ಸಾವನ್ನಪ್ಪಿದ್ದು, ಓರ್ವ ಗಾಯಗೊಂಡಿದ್ದಾರೆ ಎಂದು ಅಧಿಕಾಇಗಳು ಬುಧವಾರ ತಿಳಿಸಿದ್ದಾರೆ.
ಮಂಗಳವಾರ ಸಂಜೆ ವಿಮಾನ ಟೇಕಾಫ್ ಆದ ಕೇವಲ ಮೂರು ನಿಮಿಷಗಳಲ್ಲೇ ಪತನವಾಗಿದ್ದು, ದುರಂತದಲ್ಲಿ ಓರ್ವ ವ್ಯಕ್ತಿ ಮಾತ್ರ ಬದುಕುಳಿದ್ದಾರೆ. ವಿಮಾನದ ತಂತ್ರಜ್ಞನನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಹೆಚ್ಚಿನ ಚಿಕಿತ್ಸೆಗಾಗಿ ರಾಜಧಾನಿ ಬೊಗೊಟಾಗೆ ಕಳುಹಿಸಲಾಗುವುದು ಎಂದು ಕೊಲಂಬಿಯಾ ನಾಗರಿಕ ವಿಮಾನಯಾನ ಅಧಿಕಾರಿಗಳು ತಿಳಿಸಿದ್ದಾರೆ.
ವಿಮಾನ ಪತನಕ್ಕೆ ಕಾರಣವೇನೆಂಬುದು ಇನ್ನೂ ತಿಳಿದು ಬಂದಿಲ್ಲ. ಘಟನೆಯಲ್ಲಿ ಪೈಲಟ್, ಸಹ ಪೈಲಟ್, ವಿಮಾನದ ಇಂಜಿನಿಯರ್ ಹಾಗೂ ವಿತರಕ ಮೃತಪಟ್ಟಿರುವುದಾಗಿ ಅವರು ಹೇಳಿದರು.