ಹೊಸದಿಲ್ಲಿ: ಭದ್ರತಾ ಪಡೆ ಸಿಬ್ಬಂದಿಗಳು ಲಷ್ಕರ್ ತಯ್ಯಿಬಾದ ಓರ್ವ ಕಮಾಂಡರ್ ನನ್ನು ಹತ್ಯೆಗೈದ ಘಟನೆ ಗುರುವಾರ ಉತ್ತರ ಕಾಶ್ಮೀರದ ಬಂಡಿಪೋರಾ ಜಿಲ್ಲೆಯಲ್ಲಿ ನಡೆದಿದೆ.
ಹಾಜಿನ್ ಪ್ರದೇಶದ ಪಾರ್ರೆ ಮೊಹಲ್ಲಾದಲ್ಲಿ ಉಗ್ರರು ಅಡಗಿ ಕುಳಿತಿದ್ದು, ಗುಪ್ತಚರ ವಿಭಾಗದ ಮಾಹಿತಿ ಮೇರೆಗೆ ಶೋಧ ಕಾರ್ಯ ಆರಂಭಿಸಿದ ಭದ್ರತಾ ಪಡೆ ಅಡಗಿ ಕುಳಿತಿದ್ದ ಓರ್ವ ಉಗ್ರನನ್ನು ಹತ್ಯೆಮಾಡಿದೆ.
ಕಾರ್ಯಾಚರಣೆಯಲ್ಲಿ ಭದ್ರತಾ ಪಡೆಯ ಜವಾನ ಗಂಭೀರವಾಗಿ ಗಾಯಗೊಂಡಿದ್ದು, ಅಡಗಿ ಕುಳಿತಿದ್ದ ಉಗ್ರ ಗುಂಡಿನ ದಾಳಿ ಆರಂಭಿಸಿದ್ದಾನೆ. ಪ್ರತಿ ದಾಳಿಯಲ್ಲಿ ಉಗ್ರನ ಹತ್ಯೆಯಾಗಿದೆ.
ಅನಂತನಾಗ್ ಜಿಲ್ಲೆಯಲ್ಲಿ ಮೂವರು ಉಗ್ರರನ್ನು ಎರಡು ದಿನಗಳ ಹಿಂದೆ ಗುಂಡಿನ ಚಕಮಕಿಯಲ್ಲಿ ಭದ್ರತಾ ಪಡೆಗಳು ಕೊಂದು ಹಾಕಿದ್ದು, ಕಳೆದ ಮೂರು ದಿನಗಳಲ್ಲಿ ಪಾರ್ರೆ ಮೊಹಲ್ಲಾದಲ್ಲಿ ನಡೆದ ಎರಡನೇ ಘಟನೆ ಇದಾಗಿದ್ದು, ಜ.6 ರಂದು ಸೇನೆ ಹಾಗೂ ಪೊಲೀಸರು ಬುಡ್ಗಾಂ ಜಿಲ್ಲೆಯ ಮಛು ಪ್ರದೇಶದಲ್ಲಿ ಅಲ್ ಬದರ್ ಉಗ್ರ ಮುಜಫರ್ ಅಹ್ಮದ್ ಎಂಬವನನ್ನು ಎನ್ಕೌಂಟರಿನಲ್ಲಿ ಬಲಿತೆಗೆದುಕೊಂಡಿದ್ದರು.